Select Your Language

Notifications

webdunia
webdunia
webdunia
webdunia

ಮೈತ್ರಿ ಸರ್ಕಾರ ಪತನಕ್ಕೆ ಆ ವಸ್ತು ಒಂದು ಕಾರಣವಂತೆ. ಹಾಗಾದ್ರೆ ಯಾವುದು ಆ ವಸ್ತು?

ಮೈತ್ರಿ ಸರ್ಕಾರ ಪತನಕ್ಕೆ ಆ ವಸ್ತು ಒಂದು ಕಾರಣವಂತೆ. ಹಾಗಾದ್ರೆ ಯಾವುದು ಆ ವಸ್ತು?
ಬೆಂಗಳೂರು , ಶುಕ್ರವಾರ, 26 ಜುಲೈ 2019 (13:06 IST)
ಬೆಂಗಳೂರು : ಸರ್ಕಾರ ಪತನಕ್ಕೂ ಜಾರಕಿಹೊಳಿ ಕುಟುಂಬಕ್ಕೂ ಯಾವುದೇ  ಸಂಬಂಧವಿಲ್ಲ. ಇದಕ್ಕೆ ಕಾರಣ ಒಂದು ವಸ್ತು ಎಂದು ಸತೀಶ್​ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.




ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸತೀಶ್​ ಜಾರಕಿಹೊಳಿ ಈ ರೀತಿಯಾಗಿ ಹೇಳಿದ್ದಾರೆ.  ಇನ್ನು ಯಾವ ವಸ್ತುವಿನಿಂದಾಗಿ ಈ ಸರ್ಕಾರ ಪತನವಾಗಿದೆ ಎಂಬುದನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸುತ್ತೇನೆ. ಯಾವ ಕಾರಣದಿಂದ ಸರ್ಕಾರ ಬಿದ್ದಿದೆ ಎಂಬುದು ಜನರಿಗೆ ಆದಷ್ಟು ಬೇಗ ತಿಳಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.


ಜಾರಕಿಹೊಳಿ ಕುಟುಂಬದ ಒಳಜಗಳ, ರಮೇಶ್​ ಜಾರಕಿಹೊಳಿ ಅಸಮಾಧಾನದಿಂದ ಸರ್ಕಾರ ಪತನವಾಗಿದೆ, ಮೈತ್ರಿ ಸರ್ಕಾರ ಬೀಳಲು ರಮೇಶ್​ ಜಾರಕಿಹೊಳಿಯೇ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದು ಸುಳ್ಳು. ಈ ರೀತಿಯ ಕೆಟ್ಟ ಹೆಸರು ನಮ್ಮ ಕುಟುಂಬಕ್ಕೆ ಬರಬಾರದು ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಮತ್ತೆ ಸಿಎಂ; ಶೋಭಾ ಕರಂದ್ಲಾಜೆ ಫುಲ್ ಖುಷ್