Publish Date: Fri, 26 Jul 2019 (08:07 IST)
Updated Date: Fri, 26 Jul 2019 (08:09 IST)
ಬೆಂಗಳೂರು : ನಾನು 28 ವರ್ಷದ ಮಹಿಳೆ. ನಾನು ಸುಖಕರವಾದ ದಾಂಪತ್ಯ ಜೀವನವನ್ನು ಹೊಂದಿದ್ದೇನೆ. ನನಗೆ 4 ವರ್ಷದ ಮಗುವಿದೆ. ನಾನು ನನ್ನ ಗಂಡ ಉತ್ತಮವಾದ ಲೈಂಗಿಕ ಜೀವನವನ್ನು ಹೊಂದಿದ್ದೇವು. ಆದರೆ ಈಗ ನಮ್ಮ ಲೈಂಗಿಕ ಜೀವನ ಉತ್ತಮವಾಗಿಲ್ಲ. ನಾನು ಒಬ್ಬ ಪುರುಷನ ಜೊತೆ ಸ್ನೇಹವನ್ನು ಹೊಂದಿದ್ದೇನೆ. ನಾನು ಅವನ ಜೊತೆ ಸಾಕಷ್ಟು ಬಾರಿ ಫೋನ್ ನಲ್ಲಿ ಮಾತನಾಡುತ್ತೇನೆ, ನಾವಿಬ್ಬರೂ ಲೈಂಗಿಕತೆಯ ಬಗ್ಗೆಯೂ ಮಾತುಕತೆ ನಡೆಸುತ್ತಿದ್ದೇವು. ಆದಕಾರಣ ನಾನು ಆತನ ಕಡೆಗೆ ಆಕರ್ಷಿತಳಾಗಿದ್ದೇನೆ. ಹಾಗೇ ಆತನ ಜೊತೆ ಸಂಬಂಧವನ್ನು ಹೊಂದಲು ಬಯಸುತ್ತಿದ್ದೇನೆ. ಆದರೆ ನಾನು ಅವನನ್ನು ಇಲ್ಲಿಯವರೆಗೂ ಭೇಟಿ ಮಾಡಿಲ್ಲ. ನನಗೆ ನನ್ನ ಪತಿಯ ಬಗ್ಗೆ ಆಸಕ್ತಿ ಇಲ್ಲ. ನಾನು ಏನು ಮಾಡಲಿ?
ಅಷ್ಟು ತೃಪ್ತಿಕರವಾದ ಲೈಂಗಿಕ ಜೀವನವನ್ನು ನೀವೇಕೆ ಹಾಳು ಮಾಡಿಕೊಳ್ಳಬೇಕು. ಮೊದಲು ನಿಮ್ಮ ಗಂಡ ಮತ್ತು ನಿಮ್ಮ ಮಗುವಿನ ಬಗ್ಗೆ ಯೋಚಿಸಿ. ನಿಮ್ಮ ಲೈಂಗಿಕ ಜೀವನವನ್ನು ಸರಿಪಡಿಸಿಕೊಳ್ಳಿ. ಬೇಡವಾದ ಯೋಚನೆಗಳಿಂದ ದೂರವಿರಿ.