ಬೆಂಗಳೂರು: ಸಾರ್ವಜನಿಕ ಸಾರಿಗೆ ಬಸ್ ಗಳಲ್ಲಿ ಸಂಚರಿಸುವಾಗ ಮಹಿಳೆಯರು ಸಾಕಷ್ಟು ಬಾರಿ ಲೈಂಗಿಕ ಕಿರುಕುಳಕ್ಕೊಳಗಾಗುತ್ತಾರೆ. ಇದೇ ರೀತಿ ಬಿಎಂಟಿಸಿ ಬಸ್ ನಲ್ಲಿ ಚಪಲ ಚೆನ್ನಿಗರಾಯ ವೃದ್ಧ ಎದುರು ಕೂತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕ ಪೋರ್ಟ್ ಪೊಲಿಯೋ ಎಂಬ ಎಕ್ಸ್ ಪೇಜ್ ನಲ್ಲಿ ಇಂತಹದ್ದೊಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ಬಿಎಂಟಿಸಿ ಬಸ್ ನಲ್ಲಿ ವಯೋವೃದ್ಧನೊಬ್ಬ ಕೂತಿರುತ್ತಾರೆ. ಬಸ್ ಹೆಚ್ಚು ರಶ್ ಇರುವುದಿಲ್ಲ. ಆತನ ಮುಂದಿನ ಸೀಟ್ ನಲ್ಲಿ ಮಹಿಳೆ ಕೂತಿರುತ್ತಾಳೆ.
ವೃದ್ಧ ಮೆತ್ತಗೆ ಕೈ ಮುಂದೆ ಹಿಡಿದುಕೊಂಡು ಮಹಿಳೆಯ ಹಿಂಭಾಗವನ್ನು ಹಿಡಿದು ಅಸಭ್ಯವಾಗಿ ವರ್ತಿಸುತ್ತಾನೆ. ಇದನ್ನು ಬಸ್ ನಲ್ಲಿದ್ದ ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿಕೊಂಡಿದ್ದಾರೆ.
ವೃದ್ಧನ ವರ್ತನೆ ತಿಳಿದ ಮಹಿಳೆ ನೇರವಾಗಿ ಆತನಿಗೆ ಹೊಡೆಯಲು ಕೈ ಎತ್ತುತ್ತಾಳೆ ಮತ್ತು ಆತನ ವರ್ತನೆಯನ್ನು ಪ್ರಶ್ನಿಸುತ್ತಾಳೆ. ಆಗ ವೃದ್ಧ ಅಮಾಯಕನಂತೆ ಪೋಸ್ ಕೊಡುತ್ತಾನೆ. ಆಗ ಸಹ ಪ್ರಯಾಣಿಕರೂ ಎಲ್ಲಾ ನಮ್ಮ ಬಳಿ ವಿಡಿಯೋ ಇದೆ ಎನ್ನುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.