ಲಕ್ನೋ: ಪಹಲ್ಗಾಮ್ ದಾಳಿ ಬೆನ್ನಲ್ಲೇ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಉತ್ತರ ಪ್ರದೇಶದಲ್ಲಿ ರಸ್ತೆ ಮೇಲೆ ಅಂಟಿಸಿದ್ದ ಪಾಕಿಸ್ತಾನ ಧ್ವಜವನ್ನು ತೆಗೆಯಲು ಯತ್ನಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ವಿದ್ಯಾರ್ಥಿನಿಯನ್ನು ಶಾಲೆ ಅಮಾನತು ಮಾಡಿ ಕ್ರಮಕೈಗೊಂಡಿದೆ.
ಪಹಲ್ಗಾಮ್ ನಲ್ಲಿ ಉಗ್ರರು ಅಮಾಯಕ ಹಿಂದೂ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಕೊಂದು ಹಾಕಿದ್ದರು. ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿದೆ. ಈ ನಡುವೆ ಕೆಲವರು ದೇಶದೊಳಗಿದ್ದುಕೊಂಡೇ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಘಟನೆಗಳು ನಡೆದಿತ್ತು.
ಇದೀಗ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ರಸ್ತೆ ಮೇಲೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅಂಟಿಸಿದ್ದ ಪಾಕಿಸ್ತಾನದ ಧ್ವಜ ಗಮನಿಸಿದ್ದಾಳೆ. ಇದನ್ನು ನೋಡಿ ಆಕೆ ತೆಗೆಯಲು ಯತ್ನಿಸಿದ್ದಾಳೆ. ಬಳಿಕ ತನ್ನ ಸ್ಕೂಟಿ ಏರಿ ಹೋಗಿದ್ದಾಳೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಆಕೆ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿದೆ. ಈ ವಿಡಿಯೋ ಇಲ್ಲಿದೆ ನೋಡಿ.