Select Your Language

Notifications

webdunia
webdunia
webdunia
webdunia

ಪೊಲೀಸರ ತಂಟೆಗೆ ಬಂದರೆ ಹುಷಾರ್‌ ಎಂದು ಸಿಎಂಗೆ ವಾರ್ನಿಂಗ್‌ ನೀಡಿದ್ದ ಕಾನ್‌ಸ್ಟೇಬಲ್ ಅಮಾನತು

Chief Minister Siddaramaiah

Sampriya

ಮೈಸೂರು , ಮಂಗಳವಾರ, 6 ಮೇ 2025 (14:27 IST)
Photo Courtesy X
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಂದನಾತ್ಮಕವಾಗಿ ವಿಡಿಯೋ ಮಾಡಿ, ಸಾಮಾಜಿಕ‌ ಜಾಲತಾಣದಲ್ಲಿ ಹರಿಬಿಟ್ಟಿದ್ದ ಇಲ್ಲಿನ ಕೇಂದ್ರ ಕಾರಾಗೃಹದ ಕಾನ್‌ಸ್ಟೇಬಲ್ ಎಚ್.ಎನ್.ಮಧು ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಎಚ್.ಎನ್.ಮಧು ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಾರಾಗೃಹ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ. ಮಧುಕುಮಾರ್ ಅವರು ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದ್ದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಹೆಚ್ಚುವರಿ ಎಸ್ಪಿ ಮೇಲೆ ಕೈ ಎತ್ತಿದ ಬಗ್ಗೆ ಎ.28ರಂದು ಎಚ್.ಎನ್‌.ಮಧು ಕುಮಾರ್ ವಿಡಿಯೊ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಪೊಲೀಸರ ತಂಟೆಗೆ ಬಂದರೆ ಹುಷಾರ್‌ ಎಂದು ಮುಖ್ಯಮಂತ್ರಿಗೆ ಮಧುಕುಮಾರ್‌ ವಾರ್ನಿಂಗ್‌ ನೀಡಿದ್ದರು.

ಆ ವಿಡಿಯೊ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಮಧು ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಇಲಾಖಾ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

Mock Drill: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟು ಹೊತ್ತಿಗೆ ನಡೆಯಲಿದೆ ಮಾಕ್ ಡ್ರಿಲ್ ಇಲ್ಲಿದೆ ವಿವರ