ಬೆಂಗಳೂರು: ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆ ನಿಂತ ನೀರಾಗಿತ್ತು. ಆದರೆ ಇಂದು ಮತ್ತೆ ಅಡಿಕೆ ಕೆಲವು ವರ್ಗದ ಬೆಲೆ ಹೆಚ್ಚಳವಾಗಿದ್ದು ಕಾಳುಮೆಣಸು ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ ಇಂದು ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆಯಲ್ಲೂ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ 475 ರೂ.ಗಳಷ್ಟೇ ಇದೆ. ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ.
ಪಟೋರ ಮತ್ತು ಇತರೆ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಹೊಸ ಫಟೋರ ದರ 350 ರೂ.ಗಳಿದ್ದಿದ್ದು ಇಂದು 360 ರೂ.ಗೆ ಏರಿಕೆಯಾಗಿದೆ. ಹಳೆ ಫಟೋರ ದರ 360 ರೂ. ಇದ್ದಿದ್ದು 370 ರೂ. ಗಳಷ್ಟಾಗಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು 10 ರೂ. ಏರಿಕೆಯಾಗಿದ್ದು ಗರಿಷ್ಠ 250 ರೂ., ಹಳೆ ಉಳ್ಳಿ ದರವೂ 250 ರೂ.ಗೆ ಏರಿಕೆಯಾಗಿದೆ. ಹೊಸ ಕೋಕ ದರದಲ್ಲೂ 10 ರೂ. ಏರಿಕೆಯಾಗಿದ್ದು 300 ರೂ.ಆಗಿದೆ. ಹಳೇ ಕೋಕ 300 ರೂ. ಗಳಷ್ಟೇ ಇದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಇಂದು ಕಾಳುಮೆಣಸು ದರವೂ ಯಥಾಸ್ಥಿತಿಯಲ್ಲಿದ್ದು 670 ರೂ.ಗಳಷ್ಟೇ ಇದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.