ಬೆಂಗಳೂರು: ಸೋನು ನಿಗಂ ಕನ್ನಡ ವಿವಾದದ ಬಳಿಕ ಪೊಲೀಸರು ಹೊಸ ಮಾರ್ಗಸೂಚಿ ಹೊರಡಿಸಿದ್ದು ಇನ್ನು ಮುಂದೆ ಕೇಳುಗರು ಕನ್ನಡ ಹಾಡು ಕೇಳಿದರೆ ತಕ್ಷಣವೇ ಹಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಂ ಕನ್ನಡ ಹಾಡು ಹಾಡಿ ಎಂದು ಎಚ್ಚರಿಕೆ ನೀಡಿದ್ದ ಯುವಕನಿಗೆ ಹೀಗೆ ಹೇಳುವುದಕ್ಕೇ ಪಹಲ್ಗಾಮ್ ನಲ್ಲಿ ದಾಳಿಯಾಗಿದ್ದು ಎಂದಿದ್ದ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಿಂದ ಅವರನ್ನು ನಿಷೇಧಿಸಲಾಗಿತ್ತು.
ಇದರ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದರು. ಇದೀಗ ಸೋನು ನಿಗಂ ವಿರುದ್ಧ ಹಲವು ಕಡೆ ಕನ್ನಡ ಪರ ಹೋರಾಟಗಾರರು ದೂರು ದಾಖಲಿಸಿದ್ದಾರೆ. ಕನ್ನಡಕ್ಕೆ ಗಾಯಕ ಅವಮಾನ ಮಾಡಿದ್ದಾರೆ ಎಂದು ದೂರುಗಳು ದಾಖಲಾಗಿವೆ.
ಇದರ ಬೆನ್ನಲ್ಲೇ ಪೊಲೀಸರು ಇನ್ನು ಮುಂದೆ ಕನ್ನಡ ಹಾಡು ಕೇಳಿದರೆ ನಿರಾಕರಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಲೈವ್ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಪ್ರೇಕ್ಷಕರು ಕೇಳಿದರೆ ತಕ್ಷಣವೇ ಹಾಡಲೇಬೇಕು ಎಂದು ಸೂಚನೆ ಹೊರಡಿಸಿದ್ದಾರೆ. ಇನ್ನು ಮುಂದೆ ಬಹುಭಾಷಾ ಗಾಯಕರು ಬೆಂಗಳೂರಿನಲ್ಲಿ ಹಾಡುವಾಗ ಕೇವಲ ಅನುಮತಿ ಪತ್ರ ಮಾತ್ರವಲ್ಲ ಕೆಲವು ಮಾರ್ಗಸೂಚಿಗಳನ್ನೂ ಅನುಸರಿಸಬೇಕಾಗುತ್ತದೆ. ಜಾತಿ, ಸಮುದಾಯ, ಭಾಷೆ ಬಗ್ಗೆ ಕಾರ್ಯಕ್ರಮಗಳಲ್ಲಿ ಮಾತನಾಡುವಂತಿಲ್ಲ ಎಂದಿದ್ದಾರೆ.