Select Your Language

Notifications

webdunia
webdunia
webdunia
webdunia

Sonu Nigam: ವಿವಾದದ ಬಳಿಕ ಸೋನು ನಿಗಂ ಕನ್ನಡ ಬೆದರಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದು ಹೀಗೆ

Sonu Nigam

Krishnaveni K

ಮುಂಬೈ , ಶನಿವಾರ, 3 ಮೇ 2025 (18:52 IST)
ಮುಂಬೈ: ಇತ್ತೀಚೆಗೆ ಬೆಂಗಳೂರಿನಲ್ಲಿ ಗಾಯಕ ಸೋನು ನಿಗಂ ಕನ್ನಡದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಹಾಡುವಾಗ ಕನ್ನಡ ಹಾಡು ಹಾಡಿ ಎಂದು ಒತ್ತಾಯಿಸಿದ್ದಕ್ಕೆ ಇದರಿಂದಲೇ ಪಹಲ್ಗಾಮ್ ನಲ್ಲಿ ದಾಳಿಯಾಯಿತು ಎಂದಿದ್ದರು. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕನ್ನಡದಿಂದಲೇ ಅವರನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯ ಕೇಳಿಬಂದಿತ್ತು.

ಇದರ ಬೆನ್ನಲ್ಲೇ ಈಗ ಗಾಯಕ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಕನ್ನಡ.. ಕನ್ನಡ.. ಎಂದು ಪ್ರೀತಿಯಿಂದ ಕರೆಯುವುದಕ್ಕೂ ಬೆದರಿಕೆ ಹಾಕುವ ರೀತಿ ಕರೆಯುವುದಕ್ಕೂ ವ್ಯತ್ಯಾಸವಿದೆ. ಆವತ್ತು ಕಾರ್ಯಕ್ರಮದಲ್ಲಿ ವೇದಿಕೆಯ ಕೆಳಭಾಗದಲ್ಲೇ ನಾಲ್ವರು ಗೂಂಡಾಗಳಂತೆ ವರ್ತಿಸುತ್ತಿದ್ದರು. ಕನ್ನಡ ಹಾಡು ಹಾಡಿ ಎಂದು ಬೆದರಿಕೆ ಹಾಕುತ್ತಿದ್ದರು.

ಆಗ ನಾನು ಪಹಲ್ಗಾಮ್ ನಲ್ಲಿ ದಾಳಿ ಮಾಡುವಾಗ ಪ್ಯಾಂಟ್ ಬಿಚ್ಚುವಾಗ ಭಾಷೆ ಕೇಳಲಿಲ್ಲ ಎಂದು ಅವರಿಗೆ ಅರ್ಥ ಮಾಡಿಸಬೇಕಿತ್ತು. ಅದಕ್ಕೆ ಹಾಗೆ ಹೇಳಿದ್ದೆ. ಶೋಗಳನ್ನು ಆಯೋಜನೆ ಮಾಡಿದಾಗ ಕೆಲವರು ವೇದಿಕೆ ಮುಂಭಾಗಕ್ಕೆ ಬಂದು ತೊಂದರೆ ಕೊಡುತ್ತಾರೆ. ಮೊನ್ನೆಯೂ ಹಾಗೆಯೇ ಆಯಿತು. ಕನ್ನಡ ಹಾಡು ಹಾಡಿ ಎಂದು ಅವರು ಪ್ರೀತಿಯಿಂದ ಕೇಳಲಿಲ್ಲ, ಬದಲಾಗಿ ಬೆದರಿಕೆ ಹಾಕಿದರು. ಪ್ರತೀ ಬಾರಿ ಕನ್ನಡ ಹಾಡನ್ನು ಹಾಡಲು ರೆಡಿ ಮಾಡಿಕೊಂಡೇ ಬರುತ್ತೇವೆ. ಆದರೆ ಜಬರ್ದಸ್ತಿ ಮಾಡಬಾರದು. ಅಲ್ಲಿದ್ದವರು ನನಗೆ ಬೆದರಿಕೆ ಹಾಕುತ್ತಿದ್ದರು. ಕನ್ನಡಿಗರು ಸಾಕಷ್ಟು ಒಳ್ಳೆಯವರು. ಎಲ್ಲರೂ ಹೀಗಿರಲ್ಲ’ ಎಂದು ಸೋನು ನಿಗಂ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡತನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಗಾಯಕ ಸೋನು ನಿಗಮ್‌ಗೆ ಸಂಕಷ್ಟ: ದೂರು ದಾಖಲು