ಜನಪ್ರಿಯ ವೆಬ್ ಸರಣಿ 'ಫ್ಯಾಮಿಲಿ ಮ್ಯಾನ್ 3' ನಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದ OTT ನಟ ರೋಹಿತ್ ಬಾಸ್ಫೋರ್ ಅವರು ಭಾನುವಾರ ಅಸ್ಸಾಂನ ಗರ್ಭಂಗಾ ಅರಣ್ಯದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ, ರೋಹಿತ್ ಸ್ನೇಹಿತರೊಂದಿಗೆ ಟ್ರಿಪ್ ಹೋದವರು ಇದೀಗ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಆತನ ಸ್ನೇಹಿತರೊಬ್ಬರು ರೋಹಿತ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ರೋಹಿತ್ ಕುಟುಂಬವು ತಕ್ಷಣ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿ ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ (SDRF) ಸೂಚನೆ ನೀಡಿತು, ಅವರು ರೋಹಿತ್ ಅವರ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಸಮೀಪದ ಆಸ್ಪತ್ರೆಗೆ ಕರೆತಂದಾಗ ರೋಹಿತ್ ಅದಾಗಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ನಂತರ, ಅವರ ದೇಹವನ್ನು ಶವಪರೀಕ್ಷೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ರೋಹಿತ್‌ನ ತಲೆ, ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ಹಲವಾರು ತೀವ್ರವಾದ ಗಾಯಗಳನ್ನು ಬಹಿರಂಗಪಡಿಸಿತು.
ಇದು ಸಹಜ ಸಾವು ಅಥವಾ ಕೊಲೆಯೋ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.