Select Your Language

Notifications

webdunia
webdunia
webdunia
webdunia

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Drugs Case, Malayalam actor Shine Tom Chacko Arrest,  Vincy Aloshious

Sampriya

ಕೊಚ್ಚಿ , ಶನಿವಾರ, 19 ಏಪ್ರಿಲ್ 2025 (16:51 IST)
Photo Credit X
ಕೊಚ್ಚಿ (ಕೇರಳ): ಮಾದಕವಸ್ತು ಸೇವನೆ ಆರೋಪಕ್ಕೆ ಸಂಬಂಧಿಸಿದಂರೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅವರನ್ನು ಶನಿವಾರ ಕೊಚ್ಚಿ ನಗರ ಉತ್ತರ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಅವರು ಶೈನ್ ಟಾಮ್ ಚಾಕೊ ವಿರುದ್ಧ ದೂರು ದಾಖಲಿಸಿದ್ದು, ಸೆಟ್‌ನಲ್ಲಿ ಅನುಚಿತ ವರ್ತನೆ ಮತ್ತು ಮಾದಕ ದ್ರವ್ಯ ಸೇವನೆಯ ಆರೋಪ ಮಾಡಿದ್ದಾರೆ. ಈ ಸಂಬಂಧ ಇದೀಗ ನಟನನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಕೇರಳ ಪೊಲೀಸ್ ಅಧಿಕಾರಿಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಶೈನ್ ಬೆಳಗ್ಗೆ 10:30ಕ್ಕೆ ಹಾಜರಾಗುವುದಾಗಿ ಪೊಲೀಸರು ಹೇಳಿಕೆ ನೀಡಿದ್ದರು. ಆದರೆ, ಅವರು ನಿರೀಕ್ಷೆಗಿಂತ ಅರ್ಧ ಗಂಟೆ ಮುಂಚಿತವಾಗಿ 10 ಗಂಟೆಗೆ ತಮ್ಮ ವಕೀಲರೊಂದಿಗೆ ಎರ್ನಾಕುಲಂ ಉತ್ತರ ಪೊಲೀಸ್ ಠಾಣೆಗೆ ತಲುಪಿದರು.

ಪೊಲೀಸರು ನೀಡಿದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಶೈನ್ ಕಾಣಿಸಿಕೊಂಡರು, ಅವರು ಹೋಟೆಲ್ ಕೊಠಡಿಯಿಂದ ಓಡಿಹೋಗಲು ಪ್ರಯತ್ನಿಸಿದ ಹಿಂದಿನ ಕಾರಣವನ್ನು ವಿವರಿಸುವಂತೆ ಕೇಳಿದರು.

ಏಪ್ರಿಲ್ 17 ರಂದು, ಬಿಜೆಪಿ ನಾಯಕಿ ನಿವೇದಿತಾ ಸುಬ್ರಮಣಿಯನ್ ಅವರು ರಾಜ್ಯದ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಮೌನವಾಗಿರುವುದಕ್ಕೆ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.



Share this Story:

Follow Webdunia kannada

ಮುಂದಿನ ಸುದ್ದಿ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು