ಬೆಂಗಳೂರು: ಬಹುಭಾಷಾ ಗಾಯಕ ಸೋನು ನಿಗಂ ಬೆಂಗಳೂರಿನಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದ ವೇಳೆ ಯುವಕನೊಬ್ಬ ಕನ್ನಡ ಹಾಡು ಹಾಡಿ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಇದಕ್ಕೆ ಗಾಯಕನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಸೋನು ನಿಗಂ ಲೈವ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ವೇಳೆ ಸಭಿಕರಿಂದ ಒಬ್ಬ ಯುವಕ ಕನ್ನಡ ಹಾಡು ಹಾಡಿ ಎಂದು ಪದೇ ಪದೇ ಬೇಡಿಕೆಯಿಡುತ್ತಿದ್ದ. ಇದು ಸೋನು ನಿಗಂ ಕಿವಿಗೂ ಬಿದ್ದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅವರು ಇದೇ ಸಮಸ್ಯೆ. ನಾನು ಕನ್ನಡದಲ್ಲಿ ಅನೇಕ ಹಾಡು ಹಾಡಿದ್ದೇನೆ. ಈ ಕಾರ್ಯಕ್ರಮದಲ್ಲೂ ಹಾಡುತ್ತಿದ್ದೇನೆ. ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡು ಹಾಡಿದ್ದೇನೆ. ಆದರೆ ಕನ್ನಡದಲ್ಲಿ ಹಾಡುವುದು ನನಗೆ ಹೆಮ್ಮೆಯ ವಿಷಯ. ಯಾಕೆಂದರೆ ಇಲ್ಲಿನ ಜನ ನನಗೆ ಅಷ್ಟು ಪ್ರೀತಿ ಕೊಟ್ಟಿದ್ದಾರೆ.
ಹೀಗಾಗಿ ಕನ್ನಡದಲ್ಲಿ ಮತ್ತು ಕನ್ನಡ ನಾಡಿನಲ್ಲಿ ಕಾರ್ಯಕ್ರಮ ಕೊಡುವುದು ನನಗೆ ಗೌರವದ ವಿಷಯ. ಹಾಗಿದ್ದರೂ ಕನ್ನಡದಲ್ಲಿ ಹಾಡಿ ಎಂದು ಈ ರೀತಿ ಬೆದರಿಕೆ ಹಾಕುವುದು ಸರಿಯಲ್ಲ. ನೋಡಿ ನಮ್ಮ ಇಂತಹ ಸಮಸ್ಯೆಗಳಿಂದಲೇ ಪಹಲ್ಗಾಮ್ ನಲ್ಲಿ ದಾಳಿ ನಡೆದಿದೆ ಎಂದಿದ್ದಾರೆ.