ಬೆಂಗಳೂರು: ಪಾಕಿಸ್ತಾನದ ಜೊತೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಕೇಂದ್ರ ಸರ್ಕಾರ ನಾಳೆ ಎಲ್ಲಾ ರಾಜ್ಯಗಳಲ್ಲಿ ಮಾಕ್ ಡ್ರಿಲ್ ಮಾಡುವ ಘೋಷಣೆ ಮಾಡಿದೆ. ನಾಳೆ ಕರ್ನಾಟಕದ ಯಾವೆಲ್ಲಾ ರಾಜ್ಯಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಇಲ್ಲಿದೆ ವಿವರ.
ಕರ್ನಾಟಕದ ಮೂರು ಭಾಗಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ರಾಯಚೂರು, ಕಾರವಾರ ಮತ್ತು ಬೆಂಗಳೂರು ನಗರದಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ನಾಳೆ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ. ಮಾಕ್ ಡ್ರಿಲ್ ನಲ್ಲಿ ಎನ್ ಸಿಸಿ, ಎನ್ಎಸ್ಎಸ್, ಸಿವಿಲ್ ಡಿಫೆನ್ಸ್ ಮತ್ತು ವೈದ್ಯರು ಭಾಗಿಯಾಗಲಿದ್ದಾರೆ. ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಠಾಣೆ ಸೇರಿ 35 ಕಡೆ ಸೈರನ್ ಮೊಳಗಲಿದೆ. ಈ ಸಂದರ್ಭದಲ್ಲಿ ಜನರು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಕೇಂದ್ರ ಸುತ್ತೋಲೆ ಹೊರಡಿಸಲಿದೆ.
ತುರ್ತು ಸಂದರ್ಭಗಳಲ್ಲಿ ನಾವು ಏನು ಮಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು, ತುರ್ತು ಸಂದರ್ಭಗಳಿಗೆ ನಾವು ಎಷ್ಟು ಸಿದ್ಧರಿದ್ದೇವೆ ಎಂದು ಪರೀಕ್ಷಿಸಿಕೊಳ್ಳಲು ಈ ಮಾಕ್ ಡ್ರಿಲ್ ನಡೆಯುತ್ತದೆ.