ಮುಂಬೈ: ಪಾಕಿಸ್ತಾನದ ನಟ ಫವಾದ್ ಖಾನ್ ಅಭಿನಯದ ಅಬೀರ್ ಗುಲಾಲ್ ಸಿನಿಮಾವನ್ನು ಭಾರತದಲ್ಲಿ ನಿಷೇಧ ಮಾಡಿರುವುದನ್ನು ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದು ಅದೇನು ನೀಲಿ ಚಿತ್ರವಾ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದ ಕಾರಣಕ್ಕೆ ಕೇಂದ್ರ ಸರ್ಕಾರ ಪಾಕಿಸ್ತಾನದ ಸಿನಿಮಾಗಳು, ನಟರು, ಸೋಷಿಯಲ್ ಮೀಡಿಯಾಗೆ ಭಾರತದಲ್ಲಿ ನಿಷೇಧ ಹೇರಿದೆ.
ಅದರಂತೆ ಫವಾದ್ ಖಾನ್ ಸಿನಿಮಾಕ್ಕೂ ತಡೆ ನೀಡಲಾಗಿದೆ. ಇದನ್ನು ಈಗ ನಟ ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ. ಭಾರತದಲ್ಲಿ ಫವಾದ್ ಸಿನಿಮಾ ಬ್ಯಾನ್ ಮಾಡಲು ಅದೇನು ನೀಲಿ ಚಿತ್ರವೇ? ಯಾವುದೇ ಸಿನಿಮಾವನ್ನು ನಿಷೇಧಿಸುವುದನ್ನು ನಾನು ವಿರೋಧಿಸುತ್ತೇನೆ. ನೀಲಿ ಚಿತ್ರ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಚಿತ್ರವಲ್ಲ ಎಂದ ಮೇಲೆ ನಿಷೇಧಿಸಲು ಸಾಧ್ಯವಿಲ್ಲ.
ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದಾಗ ಪ್ರಕಾಶ್ ರಾಜ್ ಒಂದೇ ಒಂದು ಖಂಡನೆಯ ಹೇಳಿಕೆ ಕೂಡಾ ನೀಡಿರಲಿಲ್ಲ. ಈ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೊಳಗಾಗಿದ್ದರು. ಆದರೆ ಈಗ ಪಾಕ್ ನಟನ ಚಿತ್ರಕ್ಕೆ ನಿಷೇಧ ಹೇರಿರುವುದಕ್ಕೆ ಖಂಡಿಸಿದ್ದಾರೆ.