ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಪಾಕಿಸ್ತಾನದ ವಸ್ತುಗಳಿಗೆ ಭಾರತದ ಮಾರುಕಟ್ಟೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ತನ್ನ ವಸ್ತುಗಳನ್ನು ಭಾರತಕ್ಕೆ ರವಾನಿಸಲು ಪಾಕಿಸ್ತಾನ ಕಳ್ಳದಾರಿಯೊಂದನ್ನು ಕಂಡುಕೊಂಡಿದೆ.
ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದೊಂದಿಗೆ ಭಾರತ ಎಲ್ಲಾ ವ್ಯಾಪಾರ, ವಹಿವಾಟುಗಳನ್ನು ಸ್ಥಗಿತಗೊಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ತನ್ನ ದೇಶದಿಂದ ವಾಣಿಜ್ಯ ವಸ್ತುಗಳನ್ನು ಭಾರತಕ್ಕೆ ರವಾನಿಸಲು ಪಾಕಿಸ್ತಾನ ಕಳ್ಳ ದಾರಿ ಹಿಡಿದಿದೆ.
ಯುಎಇನಂತಹ ಮೂರನೇ ರಾಷ್ಟ್ರದ ಲೇಬಲ್ ಅಂಟಿಸಿ ಭಾರತಕ್ಕೆ ಕಳುಹಿಸುವ ದಾರಿ ಕಂಡುಕೊಂಡಿದೆ. ಪಹಲ್ಗಾಮ್ ದಾಳಿಯಾದ ಬೆನ್ನಲ್ಲೇ ಪಾಕಿಸ್ತಾನದಿಂದ ನೇರ ಮತ್ತು ಪರೋಕ್ಷ ವ್ಯಾಪಾರ, ವಹಿವಾಟುಗಳಿಗೆ ಭಾರತ ನಿರ್ಬಂಧ ವಿಧಿಸಿತ್ತು. ಇದೀಗ ಪಾಕಿಸ್ತಾನದ ಕಳ್ಳ ಹೆಜ್ಜೆ ಕಂಡುಹಿಡಿದಿರುವ ಭಾರತದ ವಿದೇಶ ಆಮದು ವ್ಯವಹಾರಗಳ ಇಲಾಖೆ ಆಮದಾಗಿ ಬರುವ ಎಲ್ಲಾ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಸೂಚನೆ ನೀಡಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಕೃಷಿ ಉತ್ಪನ್ನಗಳನ್ನು ಕಳೆದ ಆರ್ಥಿಕ ವರ್ಷದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಪಾಕಿಸ್ತಾನಕ್ಕೆ ಭಾರತ ಕಳುಹಿಸಿಕೊಡುವ ವಸ್ತುಗಳಿಗೆ ಹೋಲಿಸಿದರೆ ಭಾರತ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ವಸ್ತುಗಳು ತೀರಾ ಕಡಿಮೆ.