Select Your Language

Notifications

webdunia
webdunia
webdunia
webdunia

India Pakistan: ನೇರ ಯುದ್ಧ ಗೆಲ್ಲಲಾಗದ ಪಾಕಿಸ್ತಾನ ಹಿಡಿದಿದೆ ಕಳ್ಳದಾರಿ

hackers

Krishnaveni K

ನವದೆಹಲಿ , ಶನಿವಾರ, 3 ಮೇ 2025 (09:03 IST)
Photo Credit: X
ನವದೆಹಲಿ: ಒಂದು ವೇಳೆ ಭಾರತ ಯುದ್ಧಕ್ಕೆ ಬಂದರೆ ನೇರವಾಗಿ ಗೆಲ್ಲಲು ಸಾಧ್ಯವಾಗದ ಪಾಕಿಸ್ತಾನ ಈಗ ಕಳ್ಳದಾರಿ ಹಿಡಿದಿದೆ. ಪಹಲ್ಗಾಮ್ ದಾಳಿ ಬಳಿಕ ಭಾರತದಿಂದ ಎದುರಾಗಬಹುದಾದ ಅಪಾಯ ಎದುರಿಸಲು ಪಾಕ್ ಇನ್ನಿಲ್ಲದ ಹರಸಾಹಸ ಮಾಡುತ್ತಿದೆ.

ಭಾರತ ಗಡಿಯಲ್ಲಿ ಸೇನೆಯನ್ನು ಸನ್ನದ್ಧಗೊಳಿಸುತ್ತಿರುವುದನ್ನು ನೋಡಿಯೇ ಪಾಕಿಸ್ತಾನ ಭಯಗೊಂಡಿದೆ. ಈ ಕಾರಣಕ್ಕೆ ತನ್ನ ಮೇಲೆ ದಾಳಿ ನಡೆಸಬಹುದು ಎಂದು ವಿದೇಶೀ ಶಕ್ತಿಗಳ ನೆರವಿಗೆ ಕೈಚಾಚುತ್ತಿದೆ. ಆದರೆ ಅಮೆರಿಕಾ ಈಗಾಗಲೇ ಪಾಕಿಸ್ತಾನಕ್ಕೆ ಬುದ್ಧಿ ಹೇಳಿದೆ. ಟರ್ಕಿ ಕೂಡಾ ಆಯುಧ ಸರಬರಾಜು ಮಾಡಲ್ಲ ಎಂದಿದೆ.

ಇನ್ನೊಂದೆಡೆ ಭಾರತದ ಯೋಜನೆ ಏನು ಎಂಬುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಈ ಕಾರಣಕ್ಕೆ ಪಾಕಿಸ್ತಾನ ಈಗ ಹ್ಯಾಕರ್ ಗಳ ಮೊರೆ ಹೋಗಿದೆ. ಹ್ಯಾಕರ್ ಗಳನ್ನು ಬಳಸಿಕೊಂಡು ಭಾರತದ ಪ್ರಮುಖ ಭದ್ರತಾ ಸಂಸ್ಥೆಗಳ ಸಿಸ್ಟಂ, ವೆಬ್ ಸೈಟ್ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ. ಈ ಮೂಲಕ ಮಾಹಿತಿ ಕದಿಯಲು ಯತ್ನಿಸುತ್ತಿದೆ.

ಆದರೆ ಇದನ್ನು ಭಾರತದ ಸೈಬರ್ ಭದ್ರತಾ ವಿಭಾಗ ಯಶಸ್ವಿಯಾಗಿ ಮೆಟ್ಟಿನಿಂತಿದ್ದು ಪಾಕಿಸ್ತಾನದ ಕಳ್ಳ ಬುದ್ಧಿಗೆ ತಕ್ಕ ಪಾಠ ಕಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Goa Shirgaon temple stampede: ಗೋವಾ ಶಿರ್ಗಾಂವ್ ದೇವಸ್ಥಾನದಲ್ಲಿ ಕಾಲ್ತುಳಿತ, 6 ಭಕ್ತರ ಸಾವು, ಹಲವರಿಗೆ ಗಾಯಕ