Select Your Language

Notifications

webdunia
webdunia
webdunia
webdunia

India Pakistan: ಪಾಕಿಸ್ತಾನದ ಕ್ರಿಕೆಟಿಗರು ಬಿಡಿ, ಕ್ರಿಕೆಟಿಗ ಇನ್ ಸ್ಟಾಗ್ರಾಂ ಖಾತೆಗೂ ಭಾರತದಲ್ಲಿ ನೋ ಎಂಟ್ರಿ

Babar Azam

Krishnaveni K

ನವದೆಹಲಿ , ಶನಿವಾರ, 3 ಮೇ 2025 (07:39 IST)
ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರು ಭಾರತೀಯ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ಕ್ರಿಕೆಟಿಗರು ಬಿಡಿ ಅವರ ಇನ್ ಸ್ಟಾಗ್ರಾಂ ಖಾತೆಗೂ ನೋ ಎಂಟ್ರಿ ನೀಡಲಾಗಿದೆ.

ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿರುವ ಭಾರತ ಆ ದೇಶದ ಪ್ರಜೆಗಳನ್ನು ಗಡೀಪಾರು ಮಾಡಿದೆ. ಇನ್ನೊಂದೆಡೆ ಪಾಕಿಸ್ತಾನದ ಯೂ ಟ್ಯೂಬ್ ಚಾನೆಲ್ ಗಳು, ಪ್ರಮುಖ ಸೋಷಿಯಲ್ ಮೀಡಿಯಾ ಖಾತೆಗಳನ್ನೂ ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ.

ಇಷ್ಟು ದಿನ ಪಾಕಿಸ್ತಾನ ಕ್ರಿಕೆಟ್ ಭಾರತದಲ್ಲಿ ಕ್ರಿಕೆಟ್ ಸರಣಿ ಆಡುವ ಬಯಕೆ ತೋಡಿಕೊಳ್ಳುತ್ತಿತ್ತು. ಈಗ  ಕ್ರಿಕೆಟ್ ಸರಣಿ ಬಿಡಿ, ಆ ದೇಶದ ಕ್ರಿಕೆಟಿಗರ ಇನ್ ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾ ಖಾತೆಗಳಿಗೂ ಇಲ್ಲಿ ಪ್ರವೇಶವಿಲ್ಲದಂತಾಗಿದೆ. ಪಾಕಿಸ್ತಾನ ಕ್ರಿಕೆಟಿಗರಾದ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಸಾಕಷ್ಟು ಫಾಲೋವರ್ ಗಳನ್ನು ಹೊಂದಿದ್ದ ಪಾಕಿಸ್ತಾನ ಕ್ರಿಕೆಟಿಗರ ಇನ್ ಸ್ಟಾಗ್ರಾಂ ಖಾತೆಗಳು ಭಾರತದಲ್ಲಿ ಬ್ಲಾಕ್ ಆಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಟೈಟನ್ಸ್‌ ವಿರುದ್ಧ ಸೋಲಿನೊಡನೆ ಟೂರ್ನಿಯಿಂದ ಹೊರಬಿದ್ದ ಸನ್‌ರೈಸರ್ಸ್‌