ಅಹಮದಾಬಾದ್: ಸಾಯಿ ಸುದರ್ಶನ್, ಶುಭಮನ್ ಗಿಲ್ ಮತ್ತು ಜಾಸ್ ಬಟ್ಲರ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಗುಜರಾತ್ ಟೈಟನ್ಸ್ ತಂಡವು 38 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತು. ಈ ಸೋಲಿನಿಂದಿಗೆ ಹಾಲಿ ರನ್ನರ್ ಅಪ್ ಹೈದರಾಬಾದ್ ತಂಡವು ಟೂರ್ನಿಯಿಂದ ಹೊರಬಿದ್ದಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೈಟನ್ಸ್‌ಗೆ ಎಡಗೈ ಬ್ಯಾಟರ್ ಸುದರ್ಶನ್ ಮತ್ತು ನಾಯಕ ಗಿಲ್ ಉತ್ತಮ ಆರಂಭ ನೀಡಿದರು. ಗಿಲ್ 76, ಬಟ್ಲರ್ 64 ಮತ್ತು 48 ರನ್ ಬಾರಿಸಿದರು. ತಂಡವು 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 224 ರನ್ ಗಳಿಸಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ತಂಡವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ (74) ಏಕಾಂಗಿ ಹೋರಾಟ ನಡೆಸಿದರು.
ಇಂದಿನ ಪಂದ್ಯವು ಎರಡೂ ತಂಡಗಳಿವೆ ಮಹತ್ವದ್ದಾಗಿತ್ತು. ಈ ಆವೃತ್ತಿಯ್ಲಲಿ ಆಡಿರುವ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದ ಗುಜರಾತ್ ತಂಡವು ಪ್ಲೇ ಆಫ್‌ಗೆ ಮತ್ತಷ್ಟು ಸನಿಹವಾಗಿದೆ. 10ರಲ್ಲಿ ಏಳನ್ನು ಸೋತಿರುವ ಹೈದರಾಬಾದ್ ಹೊರಬಿದ್ದಿದೆ.