Select Your Language

Notifications

webdunia
webdunia
webdunia
webdunia

IPL 2025: ಗಿಲ್‌ ಅಬ್ಬರಕ್ಕೆ ಬೆಚ್ಚಿದ ಸನ್‌ರೈಸರ್ಸ್‌: ಆರೇಂಜ್‌ ಕ್ಯಾಪ್‌ ಮತ್ತೆ ಪಡೆದ ಸುದರ್ಶನ್‌

Indian Premier League, Gujarat Titans, Sunrisers Hyderabad

Sampriya

ಅಹಮದಾಬಾದ್ , ಶುಕ್ರವಾರ, 2 ಮೇ 2025 (21:56 IST)
Photo Courtesy X
ಅಹಮದಾಬಾದ್: ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ ಮತ್ತು ಜಾಸ್ ಬಟ್ಲರ್‌ ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ಗೆ 225 ರನ್‌ಗಳ ದೊಡ್ಡ ಗುರಿ ನೀಡಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೈಟನ್ಸ್‌ಗೆ ಎಡಗೈ ಬ್ಯಾಟರ್‌ ಸುದರ್ಶನ್‌ ಮತ್ತು ನಾಯಕ ಗಿಲ್‌ ಉತ್ತಮ ಆರಂಭ ನೀಡಿದರು. ಗಿಲ್‌ 76, ಬಟ್ಲರ್‌ 64 ಮತ್ತು 48 ರನ್‌ ಬಾರಿಸಿದರು.

ಇಂದಿನ ಪಂದ್ಯವು ಎರಡೂ ತಂಡಗಳಿವೆ ಮಹತ್ವದ್ದಾಗಿದೆ. ಈ ಆವೃತ್ತಿಯ್ಲಲಿ ಆಡಿರುವ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ಮೂರರಲ್ಲಿ ಸೋತಿರುವ ಆತಿಥೇಯ ತಂಡ, ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತವರಿನಂಗಳದಲ್ಲಿ ಗೆಲ್ಲುವ ಛಲದಲ್ಲಿದೆ.

ರೈಸರ್ಸ್‌ ಕೂಡ ಇಷ್ಟೇ ಪಂದ್ಯಗಳನ್ನು ಆಡಿದ್ದು, ಮೂರರಲ್ಲಷ್ಟೇ ಜಯ ಕಂಡಿದೆ. ಹಾಗಾಗಿ, ಉಳಿದಿರುವ ತನ್ನ ಪಾಲಿನ ಐದೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಸ್ಥಿತಿಯಲ್ಲಿದೆ. ಹಾಗಾಗಿ, ಇಂದಿನ ಪಂದ್ಯ ಮಾಡು ಇ‌ಲ್ಲವೆ ಮಡಿ ಎಂಬಂತಾಗಿದೆ.

ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನು ಆಡಿರುವ ಸಾಯಿ ಸುದರ್ಶನ್‌ ಒಟ್ಟು 504 ರನ್‌ ಗಳಿಸಿ ಮತ್ತೆ ಆರೇಂಜ್‌ ಕ್ಯಾಪ್‌ ಪಡೆದಿದ್ದಾರೆ. ಈ ಹಾದಿಯಲ್ಲಿ ಸೂರ್ಯಕುಮಾರ್ ಯಾದವ್ (475) ಅವರನ್ನು ಹಿಂದಿಕ್ಕಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

GT vs SRH Match: ಗುಜರಾತ್ ಟೈಟನ್ಸ್ ವಿರುದ್ಧ ಟಾಸ್‌ ಗೆದ್ದ ಹೈದರಾಬಾದ್‌