ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಸಕ್ತ ಆವೃತ್ತಿಯಿಂದ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹೊರಬಿದ್ದಿದೆ. ಆತಿಥೇಯ ಚೆನ್ನೈ ತಂಡದ ಗಾಯದ ಮೇಲೆ ಪಂಜಾಬ್ ಕಿಂಗ್ಸ್ ಉಪ್ಪು ಸವರಿತು.
ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ಮತ್ತು ಶ್ರೇಯಸ್ ಅಯ್ಯರ್ ಚೆಂದದ ಬ್ಯಾಟಿಂಗ್ ಬಲದಿಂದ ಕಿಂಗ್ಸ್ 4 ವಿಕೆಟ್ ಗಳಿಂದ ಚೆನ್ನೈ ತಂಡವನ್ನು ಸೋಲಿಸಿತು.
ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡ ನಾಲ್ಕು ಎಸೆತಗಳು ಉಳಿದಿರುವಂತೆ 190 ರನ್ನಿಗೆ ಆಲೌಟ್ ಆಯಿತು. ಆಲ್‌ರೌಂಡರ್ ಸ್ಯಾಮ್ ಕರನ್ ಒತ್ತಡದ ಸ್ಥಿತಿಯಲ್ಲಿ ಬಿರುಸಿನ 88 ರನ್ (47 ಎಸೆತ) ಬಾರಿಸಿದರು. ಅದಕ್ಕುತ್ತರವಾಗಿ ಪಂಜಾಬ್ 19.4 ಓವರುಗಳ ಲ್ಲಿ 6ಕ್ಕೆ,194 ರನ್ ಗಳಿಸಿತ್ತು.
ಚೆನ್ನೈ ಆರಂಭ ನಿರಾಶಾದಾಯಕವಾಗಿತ್ತು. ಶೇಖ್ ರಶೀದ್ (11) ಮತ್ತು ಆಯುಷ್ ಮ್ಹಾತ್ರೆ (7) ಬೇಗನೇ ನಿರ್ಗಮಿಸಿದರು. ರವೀಂದ್ರ ಜಡೇಜ (17, 12ಎ) ಮತ್ತೊಮ್ಮೆ ವಿಫಲರಾದರು. ಚೆನ್ನೈ ತಂಡ ಕೊನೆಯ ಐದು ವಿಕೆಟ್‌ಗಳನ್ನು ಕೇವಲ ಆರು ರನ್‌ಗಳ (ಏಳು ಎಸೆತಗಳ) ಅಂತರದಲ್ಲಿ ಕಳೆದುಕೊಂಡಿತು. ಸ್ಯಾಮ್ ಕರನ್ 88, ಡೆವಾಲ್ಡ್ ಬ್ರೆವಿಸ್ 32 ಉಪಯುಕ್ತ ಆಟದ ನೆರವಿನಿಂದ ಗೌರವಯುತ ಮೊತ್ತ ಗಳಿಸಿದರು. ಈ ಗೆಲುವಿನಿಂದಿಗೆ ಪಂಜಾಬ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.