ಇಸ್ಲಾಮಾಬಾದ್: ಒಂದು ಕಾಲದಲ್ಲಿ ನಮಗೆ ಭಯೋತ್ಪಾದಕರ ಜೊತೆ ನಂಟಿದ್ದಿದ್ದು ನಿಜ ಎಂದು ಒಪ್ಪಿಕೊಂಡಿರುವ ಪಾಕಿಸ್ತಾನಿ ಯುವ ನಾಯಕ ಬಿಲಾವಲ್ ಜರ್ದಾರಿ ಭುಟ್ಟೋ ಈಗ ಅದೆಲ್ಲಾ ಇಲ್ಲ, ನಾವು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಪಾಕ್ ವಿದೇಶಾಂಗ ಸಚಿವರು ಕೂಡಾ ಭಯೋತ್ಪಾದಕರ ಜೊತೆ ತಮಗೆ ನಂಟಿತ್ತು ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದೀಗ ಬಿಲಾವಲ್ ಕೂಡಾ ಅದೇ ಮಾತನಾಡಿದ್ದಾರೆ.
ಫಸ್ಟ್ ಅಫ್ಘಾನಿಸ್ತಾನ ಯುದ್ಧದ ಸಂದರ್ಭದಲ್ಲಿ ನಾವು ಉಗ್ರರನ್ನು ಬೆಂಬಲಿಸಿ ಅವರನ್ನು ಬಳಸಿಕೊಂಡಿದ್ದು ನಿಜ. ಉಗ್ರ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿದ್ದೆವು. ಆದರೆ ಬೆನಜೀರ್ ಭುಟ್ಟೋ ಹತ್ಯೆ ಬಳಿಕ ಪರಿಸ್ಥಿತಿ ಬದಲಾಗಿದೆ.
ಪಾಕಿಸ್ತಾನ ಈಗ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಂಡಿದೆ. ನಾವೀಗ ಉಗ್ರರನ್ನು ಪೋಷಿಸುತ್ತಿಲ್ಲ. ಅದು ನಮ್ಮ ಇತಹಾಸದ ಭಾಗವಾಗಿರುವುದು ದುರದೃಷ್ಟಕರ. ಆದರೆ ಈಗ ಪಾಕಿಸ್ತಾನದ ಪರಿಸ್ಥಿತಿ ಹಾಗಿಲ್ಲ ಎಂದು ಬಿಲಾವಲ್ ಹೇಳಿಕೊಂಡಿದ್ದಾರೆ.