Select Your Language

Notifications

webdunia
webdunia
webdunia
webdunia

India Pakistan: ಯುದ್ಧದ ಕಾರ್ಮೋಡ ಬೆನ್ನಲ್ಲೇ ಭಾರತದಿಂದ ಮತ್ತೊಂದು ದಿಟ್ಟ ಹೆಜ್ಜೆ

Indian navy

Krishnaveni K

ಜಮ್ಮು ಕಾಶ್ಮೀರ , ಗುರುವಾರ, 1 ಮೇ 2025 (13:25 IST)
Photo Credit: X

ಜಮ್ಮು ಕಾಶ್ಮೀರ: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಕಾರ್ಮೋಡವಿದ್ದು, ಭಾರತೀಯ ಸೇನೆ ಮತ್ತೊಂದು ದಿಟ್ಟ ಹೆಜ್ಜೆ ಮೂಲಕ ಪಾಕಿಸ್ತಾನ ನಡುಗುವಂತೆ ಮಾಡಿದೆ.

ಪಹಲ್ಗಾಮ್ ನಲ್ಲಿ ಉಗ್ರರು ನರಮೇಧ ಮಾಡಿದ ಬಳಿಕ ಗಡಿಯಲ್ಲಿ ಯುದ್ಧದ ವಾತಾವರಣವಿದೆ. ಈಗಾಗಲೇ ಭಾರತೀಯ ವಾಯುಸೇನೆ, ನೌಕಾಸೇನೆ ವಿಶೇಷ ವಿಡಿಯೋ ಮೂಲಕ ತಮ್ಮ ಸಾಮರ್ಥ್ಯದ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ.

ಪಹಲ್ಗಾಮ್ ದಾಳಿ ನಡೆದ ಮರುದಿನವೇ ಭಾರತೀಯ ನೌಕಾಸೇನೆ ಪಾಕಿಸ್ತಾನದ ಸಮುದ್ರ ಗಡಿಯಲ್ಲಿ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ನಿಲ್ಲಿಸಿತ್ತು. ಜೊತೆಗೆ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಮಾಡುವ ವಿಡಿಯೋ ಪ್ರಕಟಿಸಿತ್ತು.

ಇದೀಗ ಭಾರತೀಯ ಸೇನೆ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟಿದೆ. ಸೂರತ್ ಬಳಿ ಐಎನ್ಎಸ್ ಸೂರತ್ ನೌಕೆಯನ್ನು ತಂದು ನಿಲ್ಲಿಸಲಾಗಿದೆ. ಇನ್ನೊಂದೆ ಗಡಿ ನಿಯಂತ್ರಣ ರೇಖೆ ಬಳಿ ತನ್ನ ಯುದ್ಧ ಟ್ಯಾಂಕರ್ ಗಳನ್ನೂ ರವಾನಿಸಿದೆ. ಈ ಮೂಲಕ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ ಎಂಬ ಸಂದೇಶ ರವಾನಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Pehalgam: ಪಹಲ್ಗಾಮ್ ದಾಳಿ ಮಾಡಿದ ಉಗ್ರರಿಗಿಂತಲೂ ಈ ಡೇಂಜರ್: ಇಂಥಹವರನ್ನು ನಂಬಿ ಪ್ರವಾಸ ಮಾಡೋದು ಹೇಗೆ