ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯ ಬಗ್ಗೆ ಎನ್ಐಎ ತನಿಖೆಯಲ್ಲಿ ಸಾಕಷ್ಟು ಆಘಾತಕಾರೀ ಅಂಶಗಳು ಹೊರಬೀಳುತ್ತಿವೆ. ಇದರ ವಿವರ ನೋಡಿದರೆ ಉಗ್ರರಿಗಿಂತಲೂ ಇವರೇ ಡೇಂಜರ್. ಇವರನ್ನು ನಂಬಿ ಪ್ರವಾಸ ಹೋಗುವುದು ಹೇಗೆ ಎಂದು ಅನಿಸಬಹುದು.
ಪಹಲ್ಗಾಮ್ ನಲ್ಲಿ ದಾಳಿ ನಡೆಸುವ ಮೊದಲು ಉಗ್ರರು ಬೇರೆ ಮೂರು ಕಡೆಯೂ ಸ್ಕೆಚ್ ಹಾಕಿದ್ದರಂತೆ. ಅರು ವ್ಯಾಲಿ, ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ವ್ಯಾಲಿಯಲ್ಲೂ ದಾಳಿಗೆ ಸ್ಕೆಚ್ ಹಾಕಿದ್ದರು. ಆದರೆ ಅಲ್ಲೆಲ್ಲಾ ಭದ್ರತೆಯಿತ್ತು.
ಈ ಕಾರಣಕ್ಕೆ ಕೊನೆಗೆ ಭದ್ರತೆ ಕಡಿಮೆಯಿರುವ ಬೈಸರನ್ ವ್ಯಾಲಿಯನ್ನೇ ದಾಳಿಗೆ ಆಯ್ಕೆ ಮಾಡಿಕೊಂಡರು. ವಿಶೇಷವೆಂದರೆ ದಾಳಿಕೋರರಿಗೆ ಸ್ಥಳೀಯರೇ ಸಹಾಯ ಮಾಡಿದ್ದರು. ನಾಲ್ವರು ಸ್ಥಳೀಯ ಓವರ್ ಗ್ರೌಂಡ್ ವರ್ಕರ್ ಗಳಿಂದ ಲಾಜಿಸ್ಟಿಕ್ ಸಹಾಯ ಸಿಕ್ಕಿತ್ತು. ಉಗ್ರರಿಗೆ ಸಹಾಯ ಮಾಡಿದ ಆರೋಪದಲ್ಲಿ 20 ಸ್ಥಳೀಯರನ್ನು ಬಂಧಿಸಲಾಗಿದೆ.
ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿನ ಸ್ಥಳೀಯರನ್ನು ನಂಬಿ ಪ್ರವಾಸಕ್ಕೆ ಬರುತ್ತಾರೆ. ಪ್ರವಾಸಿಗರಿಂದ ಈ ಸ್ಥಳೀಯರ ಜೀವನವೇ ಸುಧಾರಿಸುತ್ತದೆ. ಆದರೆ ಸ್ಥಳೀಯರೇ ಈ ರೀತಿ ಮಾಡಿದರೆ ಪ್ರವಾಸಿಗರು ಯಾವ ಧೈರ್ಯದ ಮೇಲೆ ಪ್ರವಾಸ ಮಾಡುವುದು ಎಂಬ ಪ್ರಶ್ನೆ ಮೂಡಿದೆ.