Select Your Language

Notifications

webdunia
webdunia
webdunia
webdunia

PM Modi: ಉಗ್ರರ ದಮನಕ್ಕೆ ಸೇನೆಗೆ ಸಂಪೂರ್ಣ ಪವರ್ ಕೊಟ್ಟ ಪ್ರಧಾನಿ ಮೋದಿ

Modi meeting

Krishnaveni K

ನವದೆಹಲಿ , ಮಂಗಳವಾರ, 29 ಏಪ್ರಿಲ್ 2025 (20:13 IST)
Photo Credit: X
ನವದೆಹಲಿ: ಉಗ್ರರ ದಮನಕ್ಕೆ ಭಾರತೀಯ ಸೇನೆಗೆ ಸಂಪೂರ್ಣ ಪವರ್ ಕೊಟ್ಟಿದ್ದಾರೆ ಪ್ರಧಾನಿ ಮೋದಿ. ಇಂದು ನಡೆದ ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ ರೊಂದಿಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ಮೋದಿ ಉಗ್ರರ ನಿಗ್ರಹಕ್ಕೆ ಸೇನೆಗೆ ಸಂಪೂರ್ಣ ಅಧಿಕಾರ ನೀಡುತ್ತಿರುವುದಾಗಿ ಹೇಳಿದ್ದಾರೆ.

‘ಭಾರತೀಯ ಸೇನೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಭಯೋತ್ಪಾದನೆಗೆ ಹೊಡೆತ ನೀಡುವುದು ನಮ್ಮ ಸಂಕಲ್ಪವಾಗಿದೆ. ಉಗ್ರರ ನಿಗ್ರಹಕ್ಕೆ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದು ಮೋದಿ ಹೇಳಿದ್ದಾರೆ.

ಈ ಸಭೆ ಬಳಿಕ ಗೃಹಸಚಿವ ಅಮಿತ್ ಶಾ ಕೂಡಾ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ಈಗ ಉಗ್ರರ ವಿರುದ್ಧ ಕಣಿವೆ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

K Annamalai: ಮೋದಿ, ಅಮಿತ್ ಶಾ ಹೆಸರಲ್ಲಿ ಅಮೆರಿಕದಲ್ಲಿ ಅಣ್ಣಾಮಲೈ ವಿಶೇಷ ಪೂಜೆ