Select Your Language

Notifications

webdunia
webdunia
webdunia
webdunia

ಹಿಂದೂ ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್ ನಲ್ಲಿ ಚೂರಿ ಇಟ್ಕೊಂಡು ಓಡಾಡಿ: ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ

Kalladka Prabhakar Bhat

Krishnaveni K

ಕಾಸರಗೋಡು , ಮಂಗಳವಾರ, 29 ಏಪ್ರಿಲ್ 2025 (11:57 IST)
ಕಾಸರಗೋಡು: ಹಿಂದೂ ಹೆಣ್ಣು ಮಕ್ಕಳು ಇನ್ನು ಮುಂದೆ ಬ್ಯಾಗ್ ನಲ್ಲಿ ಚೂರಿ ಇಟ್ಕೊಂಡು ಓಡಾಡಿ. ಆಗ ನಿಮಗೆ ಯಾರೂ ಏನೂ ಮಾಡಕ್ಕಾಗಲ್ಲ ಎಂದು ಆರ್ ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
 

 ಪಹಲ್ಗಾಮ್ ನಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸಿರುವ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಪಹಲ್ಗಾಮ್ ನಲ್ಲಿ ಉಗ್ರರಿಗೆ ತಲ್ವಾರ್ ತೋರಿಸಿದ್ರೂ ಸಾಕಿತ್ತು. ಕತೆಯೇ ಬೇರೆ ಆಗ್ತಿತ್ತು ಎಂದಿದ್ದಾರೆ.

ಹಿಂದೂ ಹೆಣ್ಣು ಮಕ್ಕಳು ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಇನ್ನು ಮುಂದೆ ಹೊರಗೆ ಹೋಗುವಾಗ ಬ್ಯಾಗ್ ನಲ್ಲಿ ಆರಿಂಚು ಉದ್ದದ ಚೂರಿ ಇಟ್ಕೊಳ್ಳಿ. ಸಂಜೆ ಮೇಲೆ ಹೊರಗಡೆ ಹೋಗುವಾಗ ನಿಮ್ಮ ಸುರಕ್ಷತೆಗೆ ಬೇಕಾಗುತ್ತದೆ.

ಚೂರಿ ಇಟ್ಕೊಳ್ಳಲು ಯಾರ ಪರ್ಮಿಷನ್ ಕೂಡಾ ಬೇಕಾಗಿಲ್ಲ. ಸಂಜೆ ಮೇಲೆ ಓಡಾಡುವಾಗ ಯಾರಾದರೂ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಆಗ ಅವರ ಬಳಿ ಬೇಡಿಕೊಂಡರೆ ಪ್ರಯೋಜನವಿಲ್ಲ. ಅದರ ಬದಲು ಚೂರಿ ತೋರಿಸಿ ಬಾ ಎಂದು ಸವಾಲು ಹಾಕಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ ನೀಡಿದ್ದಾರೆ.

https://kannada.webdunia.com/article/news-in-kannada/pehalgam-attack-gyp-line-operater-says-allah-akbar-in-three-times-nia-probes-125042900012_1.html

Share this Story:

Follow Webdunia kannada

ಮುಂದಿನ ಸುದ್ದಿ

Pehalgam attack: ಜಿಪ್ ಲೈನ್ ಆಪರೇಟರ್ ಅಲ್ಲಾಹು ಅಕ್ಬರ್ ಎಂದಿದ್ದ, ಶುರುವಾಯ್ತು ಹೊಸ ಅನುಮಾನ