ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಮಾಡುವಾಗ ವ್ಯಕ್ತಿಯೊಬ್ಬ ಜಿಪ್ ಲೈನ್ ನಲ್ಲಿ ರೈಡ್ ಮಾಡುವಾಗ ತೆಗೆದ ಸೆಲ್ಫೀ ವಿಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ಆದರೆ ಆ ಜಿಪ್ ಲೈನ್ ಆಪರೇಟರ್ ಆ ಸಂದರ್ಭದಲ್ಲಿ ಅಲ್ಲಾಹು ಅಕ್ಬರ್ ಎಂದಿದ್ದು ಈಗ ಅನುಮಾನಕ್ಕೆ ಕಾರಣವಾಗಿದೆ.
ಜಿಪ್ ಲೈನ್ ನಲ್ಲಿ ಸಾಗುವಾಗ ಸೆಲ್ಫೀ ವಿಡಿಯೋ ಮಾಡಿದ್ದ ವ್ಯಕ್ತಿಯನ್ನು ರುಷಿ ಬಟ್ ಎಂದು ಗುರುತಿಸಲಾಗಿದೆ. ಗುಜರಾತ್ ಮೂಲದವರಾದ ಇವರು ಮಾಡಿದ್ದ ಸೆಲ್ಫೀ ವಿಡಿಯೋದಲ್ಲಿ ಉಗ್ರರ ದಾಳಿಯ ಲೈವ್ ದೃಶ್ಯ ನೋಡಬಹುದಾಗಿದೆ.
ಅವರು ಜಿಪ್ ಲೈನ್ ನಲ್ಲಿ ಹೊರಡುವ ಮುನ್ನವೇ ಅಲ್ಲಿ ಗುಂಡಿನ ಶಬ್ಧ ಕೇಳಿಸುತ್ತದೆ. ಆದರೆ ರುಷಿ ಅವರಿಗೆ ಇದರ ಅರಿವೇ ಇರುವುದಿಲ್ಲ. ಅವರು ರೈಡಿಂಗ್ ಖುಷಿಯಲ್ಲಿರುತ್ತಾರೆ. ಈ ವೇಳೆ ಅವರನ್ನು ಕಳುಹಿಸಿಕೊಡುವ ಆಪರೇಟರ್ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಹೇಳುತ್ತಾನೆ. ಹೀಗಾಗಿ ಆತನಿಗೆ ದಾಳಿಯ ಮುನ್ಸೂಚನೆ ಮೊದಲೇ ಇತ್ತು ಎಂಬ ಅನುಮಾನ ಶುರುವಾಗಿತ್ತು.
ಹಾಗಿದ್ದರೂ ಆತ ರುಷಿ ಅವರನ್ನು ರೈಡ್ ಗೆ ಕಳುಹಿಸಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ರುಷಿ ಅವರೇ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಎನ್ಐಎ ತಂಡ ರುಷಿ ವಿಡಿಯೋ ಆಧರಿಸಿ ಜಿಪ್ ಲೈನ್ ಆಪರೇಟರ್ ನನ್ನೂ ವಿಚಾರಣೆಗೊಳಪಡಿಸಿದ್ದಾರೆ.