ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಇನ್ನು ಯಾರೂ ಕಾಶ್ಮೀರ ಪ್ರವಾಸ ಮಾಡಲಾರರು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ದಾಳಿ ನಡೆದ ವಾರದೊಳಗೆ ಮತ್ತೆ ಕಣಿವೆ ರಾಜ್ಯದಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ.
ಕಳೆದ ವಾರವಷ್ಟೇ ಇಡೀ ವಿಶ್ವವೇ ಬೆಚ್ಚಿಬೀಳುವಂತ ಉಗ್ರ ದಾಳಿ ಪಹಲ್ಗಾಮ್ ನಲ್ಲಿ ನಡೆದಿತ್ತು. 26 ಪ್ರವಾಸೀ ಹಿಂದೂಗಳನ್ನು ಉಗ್ರರನ್ನು ಗುಂಡಿಕ್ಕಿ ಸಾಯಿಸಿದ್ದರು. ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಕಾವೇರಿದ ವಾತಾವರಣವಿದೆ.
ಹಾಗಿದ್ದರೂ ಈಗಲೂ ಪ್ರವಾಸಿಗರು ಧೈರ್ಯ ಮಾಡಿ ಬರುತ್ತಿರುವುದು ವಿಶೇಷ. ಕೋಲ್ಕತ್ತಾ, ಗುಜರಾತ್, ಪಶ್ಚಿಮ ಬಂಗಾಲ ಸೇರಿದಂತೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಪಹಲ್ಗಾಮ್ ಗೂ ಭೇಟಿ ನೀಡುತ್ತಿದ್ದಾರೆ.
ಪ್ರವಾಸಿಗರನ್ನು ಆಕರ್ಷಿಸಲು ಈಗ ಹೋಟೆಲ್ ಗಳೂ ರಿಯಾಯಿತಿ ನೀಡುತ್ತಿವೆ. ಉಗ್ರ ದಾಳಿಯಾದ ಬಯಲು ಪ್ರದೇಶಕ್ಕೆ ಈಗ ಪ್ರವಾಸಿಗರಿಗೆ ಅವಕಾಶವಿಲ್ಲ. ಆದರೆ ಅದರ ಹೊರತುಪಡಿಸಿ ಉಳಿದ ಜಾಗಗಳಿಗೆ ಪ್ರವಾಸಿಗರು ಹೋಗುತ್ತಿದ್ದಾರೆ. ಸದ್ಯಕ್ಕೆ ಇಲ್ಲಿ ಭದ್ರತೆ ಹೆಚ್ಚಿಸಲಾಗಿದೆ.