Select Your Language

Notifications

webdunia
webdunia
webdunia
webdunia

Pakistan: ಪಾಕಿಸ್ತಾನಕ್ಕೆ ಸಿಕ್ತು ಟರ್ಕಿ ಮಿಲಿಟರಿ ಸಹಾಯ, ಚೀನಾದಿಂದ ಬೆಂಬಲ

Pakistan PM

Krishnaveni K

ಇಸ್ಲಾಮಾಬಾದ್ , ಸೋಮವಾರ, 28 ಏಪ್ರಿಲ್ 2025 (10:13 IST)
Photo Credit: X
ಇಸ್ಲಾಮಾಬಾದ್: ಭಾರತದ ಜೊತೆ ಯುದ್ಧಕ್ಕೆ ಕಾಲು ಕೆರೆದು ನಿಂತಿರುವ ಪಾಕಿಸ್ತಾನಕ್ಕೆ ಇದೀಗ ಟರ್ಕಿ ಮಿಲಿಟರಿ ಸಹಾಯ ಮಾಡಿದರೆ ಚೀನಾವೂ ಪರೋಕ್ಷವಾಗಿ ಬೆಂಬಲ ನೀಡಿದೆ.

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಭಾರತ ಒಂದಿಲ್ಲೊಂದು ಹೊಡೆತ ನೀಡುತ್ತಿದೆ. ನದಿ ನೀರು ನಿಲ್ಲಿಸಿರುವುದು, ವೀಸಾ ರದ್ದು ಮಾಡಿರುವುದು, ವ್ಯಾಪಾರ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿರುವುದು, ವೈದ್ಯಕೀಯ ಕಚ್ಚಾವಸ್ತುಗಳ ಪೂರೈಕೆ ನಿಲ್ಲಿಸಿ ತಿರುಗೇಟು ನೀಡಿದೆ.

ಇದರ ಬೆನ್ನಲ್ಲೇ ಉಭಯ ದೇಶಗಳೂ ಸೈನಿಕರ ಜಮಾವಣೆ ಮಾಡುತ್ತಿದೆ. ಒಂದೆಡೆ ಯುದ್ಧದ ವಾತಾವರಣವಿದ್ದರೆ ಇತ್ತ ಪಾಕಿಸ್ತಾನಕ್ಕೆ ಟರ್ಕಿ ಮತ್ತು ಚೀನಾ ಬೆಂಬಲ ಸಿಕ್ಕಿದೆ. ಒಂದು ವೇಳೆ ಭಾರತ-ಪಾಕಿಸ್ತಾನ ನಡುವೆ ಯುದ್ಧವಾದರೆ ಚೀನಾ ತಟಸ್ಥವಾಗಿರಬೇಕು ಎಂಬ ಪಾಕಿಸ್ತಾನದ ಬೇಡಿಕೆಯನ್ನು ಚೀನಾ ಒಪ್ಪಿಕೊಂಡಿದೆ ಎನ್ನಲಾಗಿದೆ. ಪಹಲ್ಗಾಮ್ ದಾಳಿಯ ಬಗ್ಗೆ ರಷ್ಯಾ ಮತ್ತು ಚೀನಾವನ್ನೊಳಗೊಂಡ ಅಂತಾರಾಷ್ಟ್ರೀಯ ನಿಯೋಗ ತನಿಖೆ ನಡೆಸಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ ಎನ್ನಲಾಗಿದೆ.

ಇನ್ನೊಂದೆಡೆ ಪಾಕಿಸ್ತಾನಕ್ಕೆ ಟರ್ಕಿ ಮಿಲಿಟರಿ ಸಾಮಗ್ರಿಗಳನ್ನು ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದೆ. ಟರ್ಕಿಶ್ ವಾಯುಪಡೆಯ ಸಿ-130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನ ಕರಾಚಿಗೆ ಬಂದಿಳಿದಿದೆ. ಹೀಗಾಗಿಯೇ ಪಾಕಿಸ್ತಾನ ಈಗ ಯುದ್ಧೋತ್ಸಾಹದ ಮಾತುಗಳನ್ನು ಆಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಿವಾರ ಬಿಡಿ, ರೈಲ್ವೇ ಪರೀಕ್ಷೆಗೆ ಮಂಗಳಸೂತ್ರವೂ ಇರಬಾರದಂತೆ: ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಸಚಿವ ಸೋಮಣ್ಣ