ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ ಎನ್ನುತ್ತಿರುವ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತಹ ಸಾಕ್ಷ್ಯವೊಂದು ಸಿಕ್ಕಿದೆ.
ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲ. ನಾವು ಅಂತಾರಾಷ್ಟ್ರೀಯ ಮಟ್ಟದ ತನಿಖೆಗೂ ಸಿದ್ಧ ಎಂದು ಪಾಕಿಸ್ತಾನ ಸರ್ಕಾರದ ಸಚಿವರುಗಳೇ ಕೊಚ್ಚಿಕೊಂಡಿದ್ದರು. ಇನ್ನು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ನಿಮ್ಮ ಆರೋಪಗಳಿಗೆ ಪುರಾವೆ ಏನಿದೆ ಎಂದು ಪ್ರಶ್ನೆ ಮಾಡಿದ್ದರು.
ಇದೀಗ ದಾಳಿ ನಡೆಸಿದ ಉಗ್ರರ ಪೈಕಿ ಮುಖ್ಯ ವ್ಯಕ್ತಿ ಪಾಕಿಸ್ತಾನ ಸೇನೆಯ ಮಾಜಿ ಕಮಾಂಡರ್ ಎನ್ನುವುದು ಎನ್ಐಎ ತನಿಖೆಯಲ್ಲಿ ಖಚಿತವಾಗಿದೆ. ಪಹಲ್ಗಾಮ್ ದಾಳಿಗೆ ಹಶೀಮ್ ಮುಸಾ ಮುಖ್ಯಸ್ಥನಾಗಿದ್ದ. ಈತ ಪಾಕಿಸ್ತಾನ ಪ್ಯಾರಾ ಮಿಲಿಟರಿ ಪಡೆಯ ಮಾಜಿ ಕಮಾಂಡರ್ ಆಗಿದ್ದ ಎನ್ನುವುದು ಪತ್ತೆಯಾಗಿದೆ.
ಅಲ್ಲದೆ ದಾಳಿಕೋರರಲ್ಲಿ ಒಬ್ಬಾತ ಪದೇ ಪದೇ ಫೋನ್ ಉಪಯೋಗಿಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ತನಿಖೆಯಲ್ಲಿ ಉಗ್ರರು ಸ್ಯಾಟ್ ಲೈಟ್ ಫೋನ್ ಬಳಸಿ ಕರಾಚಿಗೆ ಸಂಪರ್ಕ ಸಾಧಿಸಿದ್ದರು ಎನ್ನುವುದು ತಿಳಿದುಬಂದಿತ್ತು.