Select Your Language

Notifications

webdunia
webdunia
webdunia
webdunia

Pehalgam: ನಮ್ಮ ಮನೆ ಕೆಡವಿದ್ರಾ ನಿಮ್ಮನ್ನು ಸುಮ್ನೇ ಬಿಡಲ್ಲ: ಮತ್ತೆ ಉಗ್ರರಿಂದ ಭಾರತೀಯ ಸೇನೆಗೆ ಬೆದರಿಕೆ

Pehalgam terrorists

Krishnaveni K

ಜಮ್ಮು ಕಾಶ್ಮೀರ , ಮಂಗಳವಾರ, 29 ಏಪ್ರಿಲ್ 2025 (12:11 IST)
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ದಾಳಿ ಬಳಿಕ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದು ಉಗ್ರರ ಮನೆಗಳನ್ನು ಕೆಡವಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಈಗ ಉಗ್ರರು ಭಾರತೀಯ ಸೇನೆಗೆ ಬೆದರಿಕೆ ಹಾಕಿದ್ದಾರೆ.

ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಅದಿಲ್ ಹುಸೇನ್ ಥೋಕರ್ ಸೇರಿದಂತೆ 10 ಕ್ಕೂ ಹೆಚ್ಚು ಸಕ್ರಿಯ ಉಗ್ರರ ಮನೆಗಳನ್ನು ಭಾರತೀಯ ಸೇನೆ ಸ್ಪೋಟಕ ಬಳಸಿ ಧ್ವಂಸಗೊಳಿಸಿದೆ. ಈ ಮೂಲಕ ಪಹಲ್ಗಾಮ್ ದಾಳಿಕೋರರಿಗೆ ಪಾಠ ಕಲಿಸುತ್ತಿದೆ.

ಆದರೆ ಇದು ಉಗ್ರರ ನಿದ್ದೆಗೆಡಿಸಿದೆ. ಈ ಕಾರಣಕ್ಕೆ ಭಾರತೀಯ ಸೇನೆಗೆ ಬೆದರಿಕೆ ಹಾಕಿವೆ. ಈ ದಾಳಿಯ ಹೊಣೆಯನ್ನು ಮೊದಲು ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾದ ಟಿಆರ್ ಎಫ್ ಹೊತ್ತುಕೊಂಡಿತ್ತು. ಹೀಗಾಗಿ ಅನೇಕ ಟಿಆರ್ ಎಫ್ ಉಗ್ರರ ಮನೆಯನ್ನು ಕೆಡವಲಾಗಿತ್ತು.

ಹೀಗಾಗಿ ಈಗ ಭಾರತೀಯ ಸೇನೆ ಮತ್ತು ಕಾಶ್ಮೀರ ಪೊಲೀಸರಿಗೆ ಟಿಆರ್ ಎಫ್ ಸಂಘಟನೆ ಎಚ್ಚರಿಕೆ ನೀಡಿದೆ. ನಮ್ಮ ಮನೆಗಳನ್ನೇ ಕೆಡವುತ್ತೀರಾ ಇದಕ್ಕೆ ನೀವು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್ ನಲ್ಲಿ ಚೂರಿ ಇಟ್ಕೊಂಡು ಓಡಾಡಿ: ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ