Select Your Language

Notifications

webdunia
webdunia
webdunia
webdunia

India Pakistan: ಪಾಕಿಸ್ತಾನಕ್ಕೆ ಇನ್ನೊಂದು ಮರ್ಮಾಘಾತ ನೀಡಲು ಮುಂದಾದ ಭಾರತ

India Pakistan

Krishnaveni K

ನವದೆಹಲಿ , ಶನಿವಾರ, 3 ಮೇ 2025 (09:18 IST)
ನವದೆಹಲಿ: ಪಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಹೊಡೆತ ನೀಡುತ್ತಿರುವ ಭಾರತ ಇದೀಗ ಮತ್ತೊಂದು ಮರ್ಮಾಘಾತ ನೀಡಲು ಮುಂದಾಗಿದೆ.

ಉಗ್ರರನ್ನು ಪೋಷಿಸಿ ಭಾರತ  ವಿರೋಧಿ ಚಟುವಟಿಕೆಗಳಿಗೆ ರವಾನಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತ ತೀರ್ಮಾನಿಸಿದೆ. ಇದರ ಅನ್ವಯ ಜಾಗತಿಕ ಸಂಸ್ಥೆಗಳಿಂದ ಪಾಕಿಸ್ತಾನಕ್ಕೆ ಸಿಗುತ್ತಿರುವ ಆರ್ಥಿಕ ನೆರವು ಸ್ಥಗಿತಗೊಳಿಸಲು ಭಾರತ ಪ್ಲ್ಯಾನ್ ಮಾಡಿದೆ.

ಸದ್ಯಕ್ಕೆ ಆರ್ಥಿಕವಾಗಿ ಬಿಕಾರಿಯಾಗಿರುವ ಪಾಕಿಸ್ತಾನಕ್ಕೆ ಹಣಕಾಸಿನ ಸಹಾಯ ಸಿಗದಂತೆ ಮಾಡಲು ತೀರ್ಮಾನಿಸಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಾನಿಟರಿ ಫಂಡ್ ಸಂಸ್ಥೆಗೆ ಪಾಕಿಸಸ್ತಾನಕ್ಕೆ ಮುಂದೆ ಹಣಕಾಸಿನ ಸಹಾಯ ಮಾಡದಂತೆ ಮತ್ತು ಈಗಾಗಲೇ ನೀಡಿರುವ ಸಾಲಗಳ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದೆ.

ಐಎಂಎಫ್ ನಿಂದ ಪಾಕಿಸ್ತಾನ ಸಾಕಷ್ಟು ಸಾಲ ಪಡೆದುಕೊಂಡಿದೆ. ಒಂದು ವೇಳೆ ಇದನ್ನು ಮರುಪಾವತಿ ಮಾಡುವಂತೆ ಅಥವಾ ಮುಂದಿನ ದಿನಗಳಲ್ಲಿ ಸಾಲ ಕೊಡದೇ ಹೋದಲ್ಲಿ ಪಾಕಿಸ್ತಾನದ ಸ್ಥಿತಿ ದಯನೀಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

India Pakistan: ನೇರ ಯುದ್ಧ ಗೆಲ್ಲಲಾಗದ ಪಾಕಿಸ್ತಾನ ಹಿಡಿದಿದೆ ಕಳ್ಳದಾರಿ