ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವಾಗ ಭಾರತೀಯ ಸೇನೆಗೆ ಹೊಸ ಅಸ್ತ್ರವೊಂದರ ಬಲ ಸಿಕ್ಕಿದೆ. ಈ ಅಸ್ತ್ರದ ವಿಶೇಷತೆಯೇನು ನೋಡಿ.
ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲು ಸರ್ವ ಸನ್ನದ್ಧವಾಗಿದೆ. ಇದೀಗ ಭಾರತ ಹೊಸ ಅಸ್ತ್ರವೊಂದರ ಖರೀದಿಗೆ ರಷ್ಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ರಷ್ಯಾ ನಿರ್ಮಿತ ಇಗ್ಲಾ ಎಸ್ ಮಿಸೈಲ್ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಈಗಾಗಲೇ ರಷ್ಯಾ ಜೊತೆ 260 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ. ತುರ್ತು ಅಗತ್ಯಕ್ಕಾಗಿ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ.
ಇಗ್ಲಾ ಎಸ್ ಮಿಸೈಲ್ ಭುಜದಲ್ಲೇ ಹೊತ್ತುಕೊಂಡು ಕಳೆ ಹಂತದಲ್ಲಿ ಹಾರಾಟ ಮಾಡುವ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದು ಸುಮಾರು 6 ಕಿ.ಮೀ. ದೂರ ಮತ್ತು 3.5 ಕಿ.ಮೀ. ಎತ್ತರದಲ್ಲಿರುವ ಹಾರುವ ಹೆಲಿಕಾಪ್ಟರ್, ಡ್ರೋಣ್ ಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಯುದ್ಧದ ಸಂದರ್ಭಗಳಲ್ಲಿ, ಗಡಿ ರಕ್ಷಣೆ ಮಾಡಲು ಈ ಶಸ್ತ್ರಾಸ್ತ್ರ ತುಂಬಾ ಮಹತ್ವದ್ದಾಗಿದೆ.