Select Your Language

Notifications

webdunia
webdunia
webdunia
webdunia

Karnataka Weather: ಈ ವಾರವೂ ಮಳೆ ನಿರೀಕ್ಷೆಯಲ್ಲಿದ್ದೀರಾ ಹಾಗಿದ್ದರೆ ಹವಾಮಾನ ವರದಿ ತಪ್ಪದೇ ನೋಡಿ

Bengaluru Rains

Krishnaveni K

ಬೆಂಗಳೂರು , ಸೋಮವಾರ, 5 ಮೇ 2025 (08:15 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆಯಾಗಿತ್ತು. ಈ ವಾರವೂ ಮಳೆಯ ನಿರೀಕ್ಷೆಯಲ್ಲಿರುವವರಿಗೆ ಹವಾಮಾನ ವರದಿ ವಿವರ ಇಲ್ಲಿದೆ ನೋಡಿ.

ಕಳೆದ ವಾರ ರಾಜ್ಯ ರಾಜಧಾನಿ ಬೆಂಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆಯಾಗಿತ್ತು. ಆದರೆ ಈ ವಾರ ಮಳೆಗಿಂತ ಮೋಡ ಕವಿದ ವಾತಾವರಣವಿರುವ ಸಾಧ್ಯತೆಯಿದೆ.

ಈ ವಾರ ಮಳೆಯ ಸಾಧ್ಯತೆ ಹೆಚ್ಚಿಲ್ಲ. ಕಳೆದ ವಾರ ಭರ್ಜರಿ ಮಳೆಯಾಗಿದ್ದ ದಕ್ಷಿಣ ಕನ್ನಡದಲ್ಲೂ ಈ ವಾರ ಹೆಚ್ಚು ಮಳೆಯಿರಲ್ಲ ಎನ್ನುತ್ತಿದೆ ಹವಾಮಾನ ವರದಿಗಳು. ಆದರೆ ವಾರಂತ್ಯದಲ್ಲಿ ಮಳೆಯ ಸಾಧ್ಯತೆಯಿದೆ.

ಕಳೆದ ವಾರ ನಿರಂತರ ಮಳೆಯಾಗಿರುವುದರಿಂದ ರಾಜ್ಯದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟಿತ್ತು. ಆದರೆ ಈ ವಾರ ಕೊಂಚ ಏರಿಕೆಯಾಗುವ ಸಾಧ್ಯತೆಯಿದ್ದು 33-34 ಡಿಗ್ರಿಯವರೆಗೆ ತಲುಪುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರಬೇತಿ ವೇಳೆ ಗೋಡೆಗೆ ಡಿಕ್ಕಿ ಹೊಡೆದ ವಿಮಾನ, ಅದೃಷ್ಟವಶಾತ್ ಪೈಲೆಟ್‌ ಬಚಾವ್‌