Select Your Language

Notifications

webdunia
webdunia
webdunia
webdunia

ತರಬೇತಿ ವೇಳೆ ಗೋಡೆಗೆ ಡಿಕ್ಕಿ ಹೊಡೆದ ವಿಮಾನ, ಅದೃಷ್ಟವಶಾತ್ ಪೈಲೆಟ್‌ ಬಚಾವ್‌

ಉತ್ತರ ಪ್ರದೇಶದ ಪೈಲಟ್ ಪರ್ವ್ ಜೈನ್ ಎಂಬುವವರಿಗೆ ಟ್ರೈನಿ ವಿಮಾನ ಡಿಕ್ಕಿ ಹೊಡೆದಿದೆ

Sampriya

ಉತ್ತರಪ್ರದೇಶ , ಭಾನುವಾರ, 4 ಮೇ 2025 (22:58 IST)
Photo Credit X
ಉತ್ತರಪ್ರದೇಶ: ಭಾನುವಾರ ಉತ್ತರ ಪ್ರದೇಶದ ಅಲಿಗಢದಲ್ಲಿ ಲ್ಯಾಂಡಿಂಗ್ ವೇಳೆ ತರಬೇತಿ ವಿಮಾನವೊಂದು ವಿಮಾನ ನಿಲ್ದಾಣದ ಗೋಡೆಗೆ ಅಪ್ಪಳಿಸಿತು.

ಆ ವೇಳೆ ವಿಮಾನದಲ್ಲಿ ಟ್ರೈನಿ ಪೈಲಟ್ ಪರ್ವ್ ಜೈನ್ ಇದ್ದರು. ವಿಮಾನವು ಹಾನಿಗೊಳಗಾಗಿದ್ದರೂ, ಪೈಲಟ್ ಸುರಕ್ಷಿತವಾಗಿ ಹೊರಬಂದರು.

ಪಯೋನಿಯರ್ ಎವಿ ಏವಿಯೇಷನ್ ​​ಕಂಪನಿಗೆ ಸೇರಿದ ವಿಮಾನವು ಧನಿಪುರ ಏರ್‌ಸ್ಟ್ರಿಪ್‌ನಲ್ಲಿ ಹಾರುತ್ತಿತ್ತು. ಮಧ್ಯಾಹ್ನ 3:10ರ ಸುಮಾರಿಗೆ ಪೈಲಟ್ ವಿಮಾನವನ್ನು ಇಳಿಸಲು ಮುಂದಾದಾಗ ವಿಮಾನವು ವಿಮಾನ ನಿಲ್ದಾಣದ ಗಡಿ ಗೋಡೆಗೆ ಡಿಕ್ಕಿ ಹೊಡೆದು ಹಾನಿಗೊಳಗಾಗಿತ್ತು.

ಟ್ರೈನಿ ಪೈಲಟ್ ವಿಮಾನದಿಂದ ಜಿಗಿದು ತನ್ನನ್ನು ತಾನು ರಕ್ಷಿಸಿಕೊಂಡರು. ಘಟನೆ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀಟ್ ಪರೀಕ್ಷೆಗೂ ಮುನ್ನಾ ಜನಿವಾರ ಕಳಚಿದ ಸಿಬ್ಬಂದಿ, ಭಾರೀ ಆಕ್ರೋಶ