Select Your Language

Notifications

webdunia
webdunia
webdunia
webdunia

ನೀಟ್ ಪರೀಕ್ಷೆಗೂ ಮುನ್ನಾ ಜನಿವಾರ ಕಳಚಿದ ಸಿಬ್ಬಂದಿ, ಭಾರೀ ಆಕ್ರೋಶ

ನೀಟ್ ಪರೀಕ್ಷೆ

Sampriya

ಬೆಂಗಳೂರು , ಭಾನುವಾರ, 4 ಮೇ 2025 (22:18 IST)
Photo Credit X
ಬೆಂಗಳೂರು: ಕರ್ನಾಟಕದ ಕಲಬುರಗಿಯಲ್ಲಿರುವ ನೀಟ್ ಪರೀಕ್ಷಾ ಕೇಂದ್ರದ ಹೊರಗೆ ಬ್ರಾಹ್ಮಣ ಸಮುದಾಯದ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು.

ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸುವ ಮೊದಲು ತಮ್ಮ ಪವಿತ್ರ ದಾರವನ್ನು (ಜನಿವಾರ) ತೆಗೆಯುವಂತೆ ಕೇಳಲಾಗಿದೆ ಎಂದು ಆರೋಪಿಸಲಾಗಿದೆ.

ಕಲಬುರಗಿಯ ನೀಟ್ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ಸಮುದಾಯದ ದೊಡ್ಡ ಗುಂಪು ಭಾನುವಾರ ಘೋಷಣೆಗಳನ್ನು ಕೂಗಿ ಧರಣಿ ನಡೆಸಿತು.

ಶ್ರೀಪಾದ್ ಪಾಟೀಲ್ ಎಂಬ ಅಭ್ಯರ್ಥಿಯಲ್ಲಿ ಪರೀಕ್ಷೆಗೂ ಮೊದಲು ಅವರ ಜನಿವಾರವನ್ನು ತೆಗೆಯುವಂತೆ ಹೇಳಲಾಯಿತು. ಈ ಘಟನೆ ಬಳಿಕ ಪ್ರತಿಭಟನೆ ನಡೆಸಲಾಯಿತು.

ಇದಕ್ಕೆ ಪ್ರತಿಯಾಗಿ, ಸಮುದಾಯದ ದೊಡ್ಡ ಗುಂಪು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಧರಣಿ ನಡೆಸಿತು. ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಅಗೌರವ ತೋರುತ್ತಿದ್ದಾರೆ ಮತ್ತು ಸರ್ಕಾರದ ಸ್ವಂತ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆಯಾದ ಸುಹಾಸ್‌ ಶೆಟ್ಟಿ ಮೇಲೆ ಐದು ಕೇಸ್‌ಗಳಿವೆ: ಹೀಗಾಗಿ ಅವರ ಮನೆಗೆ ಭೇಟಿ ನೀಡಿಲ್ಲ ಎಂದ ಪರಮೇಶ್ವರ್‌