ಇಸ್ಲಾಮಾಬಾದ್: ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬಹುದಾದ ಸಾಧ್ಯತೆ ಬಗ್ಗೆ ಪಾಕಿಸ್ತಾನ ಸಂಸದ ಶೇರ್ ಅಫ್ಝಲ್ ಖಾನ್ ಮರ್ವಾರ್ ಬಳಿ ಕೇಳಿದಾಗ ಮೋದಿ ನಾನು ಹೇಳಿದ ಹಾಗೆ ಕೇಳೋದಿಕ್ಕೆ ನನ್ನ ಸಂಬಂಧಿಕರಾ ಎಂದು ನೀಡಿದ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಪಾಕಿಸ್ತಾನಕ್ಕೆ ತನ್ನ ಮೇಲೆ ಭಾರತ ದಾಳಿ ಮಾಡಬಹುದು ಎಂಬ ಭೀತಿಯಿದೆ. ಇದರ ಬಗ್ಗೆ ಪಾಕ್ ಸಂಸದ ಅಫ್ಝಲ್ ಖಾನ್ ಬಳಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿವೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಮಾಧ್ಯಮ ಪ್ರತಿನಿಧಿ, ನಿಮಗೆ ಅನಿಸುತ್ತಾ ಮೋದಿ ಸ್ವಲ್ಪ ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಅಫ್ಝಲ್ ಖಾನ್ ಮೋದಿ ಏನು ನನ್ನ ಸಂಬಂಧಿಕರಾ? ನಾನು ಹೇಳಿದ ಹಾಗೆ ಕೇಳಕ್ಕೆ ಎನ್ನುತ್ತಾರೆ.
ಒಂದು ವೇಳೆ ಭಾರತ ನಮ್ಮ ಮೇಲೆ ಯುದ್ಧ ಸಾರಿದರೆ ಏನು ಮಾಡುತ್ತೀರಿ? ನೀವು ಶಸ್ತ್ರ ಹಿಡಿದುಕೊಂಡು ಯುದ್ಧ ಭೂಮಿಗೆ ಹೋಗುತ್ತೀರಾ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿರುವ ಅಫ್ಝಲ್ ಖಾನ್ ನಾನು ಇಂಗ್ಲೆಂಡ್ ಗೆ ಹೋಗ್ತೀನಿ ಎಂದಿದ್ದಾರೆ. ಅವರ ಈ ಉತ್ತರ ಭಾರೀ ವೈರಲ್ ಆಗಿದೆ.