ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡವಿದೆ. ಇನ್ನೂ ಯುದ್ಧ ಆರಂಭವಾಗಿಲ್ಲ, ಅದಕ್ಕಿಂತ ಮೊದಲೇ ಚೀನಾ ನಮ್ಮ ಬೆಂಬಲ ಪಾಕಿಸ್ತಾನಕ್ಕೆ ಎಂದಿದೆ.
ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ನಮ್ಮ ಬೆಂಬಲ ಪಾಕಿಸ್ತಾನಕ್ಕೆ ಎಂದು ಚೀನಾ ಘೋಷಣೆ ಮಾಡಿದೆ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಚೀನಾ ಮೊದಲಿನಿಂದಲೂ ತನ್ನ ಬೇಳೆ ಬೇಯಿಸಲು ಪಾಕಿಸ್ತಾನವನ್ನು ಬೆಂಬಲಿಸುತ್ತಾ ಬಂದಿದೆ. ಈಗಲೂ ಪಾಕಿಸ್ತಾನಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.
ಒಂದೆಡೆ ಭಾರತಕ್ಕೆ ರಷ್ಯಾ, ಇಸ್ರೇಲ್, ಜಪಾನ್ ನಂತಹ ರಾಷ್ಟ್ರಗಳು ಬೆಂಬಲ ಘೋಷಿಸಿದ್ದರೆ, ಇತ್ತ ಪಾಕಿಸ್ತಾನ ಬೆಂಬಲಕ್ಕೆ ಚೀನಾ ನಿಂತಿದೆ.
ನಿನ್ನೆಯೇ ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್ ಪಾಕ್ ಅಧ್ಯಕ್ಷ ಅಲಿ ಜರ್ದಾರಿಯನ್ನು ಭೇಟಿಯಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತ ಬೇಜವಾಬ್ಧಾರಿಯುತ, ಆಕ್ರಮಣಕಾರೀ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.