Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ಸಮಸ್ಯೆಗೆ ವೇದಿಕೆಯಲ್ಲೇ ಔಷಧಿ ಕೊಟ್ಟ ನರೇಂದ್ರ ಮೋದಿ, ವಿಡಿಯೋ ವೈರಲ್‌

ಪ್ರಧಾನಿ ನರೇಂದ್ರ ಮೋದಿ

Sampriya

ಆಂಧ್ರಪ್ರದೇಶ , ಶುಕ್ರವಾರ, 2 ಮೇ 2025 (17:39 IST)
Photo Credit X
ಆಂಧ್ರಪ್ರದೇಶ: ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಅಪಾರ ಗೌರವವಿದೆ ಎಂಬುದು ಗೊತ್ತೇ ಇದೆ. ಅವರು ಸಾಮಾನ್ಯವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಲ್ಯಾಣ್ ಬಗ್ಗೆ ತುಂಬಾ ಹೆಚ್ಚು ಮಾತನಾಡುತ್ತಾ, ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಡಿಸಿಎಂ ಪವನ್ ಕಲ್ಯಾಣ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅನಾರೋಗ್ಯದಲ್ಲಿದ್ದರು. ಪ್ರಧಾನಿ ಮೋದಿ ಭಾಗವಹಿಸಿದ್ದ ಅಮರಾವತಿ 2.0 ರೀಲಾಂಚ್ ಸಮಾರಂಭದಲ್ಲಿ ಭಾಷಣ ಮಾಡುವಾಗ ಅವರು ಹಲವಾರು ಬಾರಿ ಕೆಮ್ಮುತ್ತಿದ್ದರು. ಈ ವೇಳೆ ಮೋದಿ ಅವರು ಪವನ್‌ಗೆ ಏನೋ ಕೊಟ್ಟಿದ್ದು, ಇದನ್ನು ನೋಡಿ ಅವರು ನಕ್ಕಿ ತಮ್ಮ ಆಸನದ ಕಡೆ ಹೋಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಗನ್ ಆಡಳಿತದ ವಿನಾಶ, ಅಮರಾವತಿ ನಿರೀಕ್ಷೆ ಮತ್ತು ರಾಜ್ಯವನ್ನು ಮುನ್ನಡೆಸಬಲ್ಲ ಚಂದ್ರಬಾಬು ಮತ್ತು ಮೋದಿಯವರ ಸಮರ್ಥ ನಾಯಕತ್ವ ಸೇರಿದಂತೆ ಹಲವು ವಿಷಯಗಳನ್ನು ಕಲ್ಯಾಣ್ ಅವರು ಹೇಳಿದರು. ಆದರೆ ತಮ್ಮ ಭಾಷಣದೂದ್ದಕ್ಕೂ ಕೆಟ್ಟ ಕೆಮ್ಮಿನಿಂದ ಬಳಲಿರುವುದು ಕಂಡು ಬಂದಿತು.

ಪವನ್ ಕಲ್ಯಾಣ್  ಏನಾಯಿತು ಎಂದು ತಿಳಿದ ಮೋದಿ ವೇದಿಕೆಯಲ್ಲೇ ಅವರನ್ನು ಹತ್ತಿರ ಕರೆದು ಬ್ರಾಂಕೋ ಕ್ಯಾಚ್ ಕ್ಯಾಪ್ಸುಲ್ ಅನ್ನು ನೀಡಿದರು. ಇದನ್ನು ನೋಡಿ ಪವನ್ ಕಲ್ಯಾಣ್ ನಕ್ಕರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಯಿತು.

ಮೋದಿ ಜೇಬಿನಿಂದ ಕಲ್ಯಾಣ್‌ಗೆ ಚಾಕಲೇಟ್ ಹಸ್ತಾಂತರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೀಕರ್‌ ಯು.ಟಿ. ಖಾದರ್‌ ಬೆನ್ನಲ್ಲೇ ಸಿದ್ದರಾಮಯ್ಯಗೆ ಬೆದರಿಕೆ ಕರೆ: ಕ್ರಮಕ್ಕೆ ಪೊಲೀಸರಿಗೆ ಸಿಎಂ ಸೂಚನೆ