Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಮತ್ತೆ ಪಾಕ್‌ ಕಿರಿಕ್‌: ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ

Indian Army, India-Pakistan border, Prime Minister Narendra Modi

Sampriya

ಶ್ರೀನಗರ , ಬುಧವಾರ, 30 ಏಪ್ರಿಲ್ 2025 (11:52 IST)
Photo Courtesy X
ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್‍ಒಸಿ) ಉದ್ದಕ್ಕೂ ಮತ್ತು ನಾಲ್ಕು ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿ (ಐಬಿ) ವಲಯಗಳಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದೆ.

ಜಮ್ಮು ಜಿಲ್ಲೆಯ ಪರ್ಗ್ವಾಲ್ ಮತ್ತು ರಜೌರಿ ಜಿಲ್ಲೆಯ ಸುಂದರ್‌ಬನಿ ಹಾಗೂ ನೌಶೇರಾ ಸೆಕ್ಟರ್‌ಗಳಲ್ಲಿ ಪಾಕ್ ಗುಂಡಿನ ನಡೆಸಿದೆ. ಪಾಕ್ ಸೇನೆಗೆ ಭಾರತೀಯ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ ಎಂದು ಭಾರತದ ಸೇನೆಯ ಅಧಿಕಾರಿಗಳು ಅವರು ಹೇಳಿದ್ದಾರೆ.

ಭಾರತ ದೇಶವು ಪಾಕಿಸ್ತಾನದೊಂದಿಗೆ 3,323 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ ಗುಜರಾತ್‌ನಿಂದ ಜಮ್ಮುವಿನ ಅಖ್ನೂರ್‌ವರೆಗೆ ಸುಮಾರು 2,400ಕಿ.ಮೀ. ಉದ್ದದ ಅಂತರರಾಷ್ಟ್ರೀಯ ಗಡಿ (ಐಬಿ), ಜಮ್ಮುವಿನಿಂದ ಲೇಹ್‌ವರೆಗೆ 740 ಕಿ.ಮೀ. ಉದ್ದದ ಎಲ್‍ಒಸಿ ಮತ್ತು ಸಿಯಾಚಿನ್ ಪ್ರದೇಶದಲ್ಲಿ 110 ಕಿ.ಮೀ. ಉದ್ದದ ಎಜಿಪಿಎಲ್ ಸೇರಿವೆ.

ಕಾಶ್ಮೀರ ಕಣಿವೆ ಬಾರಾಮುಲ್ಲಾ ಹಾಗೂ ಕುಪ್ವಾರ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲೂ ಪಾಕಿಸ್ತಾನ ಕದನ ವಿರಾಮ ನಿಯಮ ಉಲ್ಲಂಘಿಸಿದೆ. ಪೂಂಚ್ ಹಾಗೂ ಅಖ್ನೂರ್ ಸೆಕ್ಟರ್‌ಗಳಲ್ಲೂ ಇದಕ್ಕೆ ಸಮಾನವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ