Select Your Language

Notifications

webdunia
webdunia
webdunia
webdunia

ಪಾಕ್‌ಗೆ ಜೈಕಾರ ಹಾಕುವವರನ್ನು ಗುಂಡಿಕ್ಕಿ ಕೊಲ್ಲಿ: ಎಲ್ಲರೂ ಮೋದಿ ಪರ ನಿಲ್ಲಿ ಎಂದ ವಿಶ್ವನಾಥ್‌

Legislative Council Member A.H. Vishwanath, Pro-Pakistan Declaration, Prime Minister Narendra Modi

Sampriya

ಮೈಸೂರು , ಗುರುವಾರ, 1 ಮೇ 2025 (14:17 IST)
Photo Courtesy X
ಮೈಸೂರು: ಭಾರತದಲ್ಲಿದ್ದುಕೊಂದು ಪಾಕಿಸ್ತಾನಕ್ಕೆ ಜೈಕಾರ ಹಾಕುವವರನ್ನು ಗುಂಡಿಕ್ಕಿ ಕೊಲ್ಲಬೇಕು. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ದೇಶದ್ರೋಹಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಆಗ್ರಹಿಸಿದರು.

ಶತ್ರು ರಾಷ್ಟ್ರದ ಪರ ಜೈಕಾರ ಕೂಗಿದವರನ್ನು ಸುಮ್ಮನೆ ಬಿಟ್ಟು ಕಳುಹಿಸುವುದು ಸರಿಯಲ್ಲ. ನಮ್ಮ ದೇಶದ ಅನ್ನ ತಿಂದು, ನಮ್ಮ ನೀರು ಕುಡಿದು ಶತ್ರುಗಳಿಗೆ ಜೈ ಎನ್ನುವವರನ್ನು ಒಪ್ಪಲು ಸಾಧ್ಯವಿಲ್ಲ. ಈಗ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅವರ ಪರ ನಿಲ್ಲಬೇಕಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿಗೆ ವಿಶ್ವಾಸಾರ್ಹತೆ ಹೆಚ್ಚು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಕಾದವರನ್ನು ಕೂರಿಸಿಕೊಂಡು ಗಣತಿ ಮಾಡಿಸಿದ್ದರಿಂದ ಎಡವಟ್ಟುಗಳಾದವು. ಕಾಂತರಾಜ್ ಆಯೋಗದ ವರದಿಯ ಮೂಲ ಪ್ರತಿಯೇ ಇಲ್ಲದೆ ಹೇಗೆ ಸಮೀಕ್ಷೆ ನಡೆಸಿದ್ದಾರೆ? ಎಂದು ಪ್ರಶ್ನಿಸಿದರು.

ಕರ್ನಾಟಕದ ಜಾತಿ ಗಣತಿ ರಾಜಕೀಕರಣಗೊಂಡಿದೆ. ನಡೆಸಿದ ತಂಡವು ಒಂದು ರೀತಿ ಗಂಜಿಕೇಂದ್ರದ ತಂಡದಂತೆ ಆಗಿಹೋಯಿತು. ತಜ್ಞರಲ್ಲದೆ ಇರುವವರನ್ನೂ ಸೇರಿಸಿಕೊಂಡಿದ್ದರಿಂದ ಎಡವಟ್ಟಾದವು ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಜಾತಿಗಣತಿ ಸಮಾನ ಹಕ್ಕಿಗಾಗಿ, ಕಾಂಗ್ರೆಸ್ ನಂತೆ ಜಾತಿ ನಡುವೆ ವಿಷ ಬೀಜ ಬಿತ್ತಲು ಅಲ್ಲ: ಬಿವೈ ವಿಜಯೇಂದ್ರ