Select Your Language

Notifications

webdunia
webdunia
webdunia
webdunia

Haveri bus driver video: ಹಾವೇರಿಯಲ್ಲಿ ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಬಸ್ ಚಾಲಕ

Bus Driver namaz

Krishnaveni K

ಹಾವೇರಿ , ಗುರುವಾರ, 1 ಮೇ 2025 (09:05 IST)
Photo Credit: X
ಹಾವೇರಿ: ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕನ ವಿಡಿಯೋ ವೈರಲ್ ಆಗಿದೆ. ಇದೀಗ ಸಚಿವ ರಾಮಲಿಂಗಾ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ.

ಹಾವೇರಿಯ ಬಸ್ ಚಾಲಕ ಶಾಫುಲ್ಲಾ ನದಾಫ್ ಚಲಿಸುತ್ತಿದ್ದ ಬಸ್ ನಿಲ್ಲಿಸಿ ಬಸ್ ನೊಳಗೇ ನಮಾಜ್ ಮಾಡಿದ್ದಾರೆ. ಹುಬ್ಬಳ್ಳಿಯಿಂದ ಹಾವೇರಿಗೆ ಪ್ರಯಾಣ ಮಾಡುತ್ತಿದ್ದ ಬಸ್ ನಲ್ಲಿ ಘಟನೆ ನಡೆದಿತ್ತು.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಸಾಕಷ್ಟು ಜನ ಪ್ರಯಾಣ ಮಾಡುವ ಬಸ್ ನಲ್ಲಿ ತಮ್ಮ ಧರ್ಮದ ಆಚರಣೆ ಮಾಡುತ್ತಾ ಸಮಯ ವ್ಯರ್ಥ ಮಾಡುವ ಚಾಲಕನನ್ನು ಸಸ್ಪೆಂಡ್ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದರು.

ಇದೀಗ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿರುವ ಸಚಿವ ರಾಮಲಿಂಗಾ ರೆಡ್ಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಪ್ರಯಾಣಿಕರೊಬ್ಬರು ಮಾಡಿರುವ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಈ ಮೂರು ಜಿಲ್ಲೆ ಬಿಟ್ಟು ಮಳೆಯಲ್ಲ ಇಂದು ಬೆಂಕಿ ಮಳೆ ಗ್ಯಾರಂಟಿ