ಸಿಕ್ಕಿಂ: ದೇಶ ಕಾಯುವ ಯೋಧರ ಬಗ್ಗೆ ಚಿಕ್ಕಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಮಕ್ಕಳಿಗೆ ಯೋಧರೆಂದರೆ ಎಷ್ಟು ಗೌರವ ಎಂಬುದು ಈ ವಿಡಿಯೋ ನೋಡಿದರೇ ತಿಳಿಯುತ್ತದೆ.
ಯೋಧರನ್ನು ಕಂಡೊಡನೆ ವಂದಿಸಿ ಗೌರವ ಸಲ್ಲಿಸಬೇಕು ಎಂದು ನಾವು ಚಿಕ್ಕಮಕ್ಕಳಿದ್ದಾಗಲೇ ಹೇಳಿಕೊಡುವುದು ಮುಖ್ಯ. ರಾಷ್ಟ್ರಭಕ್ತಿಯ ಅರಿವು ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಮೂಡಬೇಕಾದರೆ ದೇಶ ಕಾಯುವ ಯೋಧರ ಬಗ್ಗೆ ಗೌರವ ಜಾಗೃತಿ ಮೂಡಿಸಬೇಕು.
ಈ ವಿಡಿಯೋದಲ್ಲಿ ಕಾಣುವ ಮಕ್ಕಳು ರಸ್ತೆ ಬದಿಯಲ್ಲಿ ತಮ್ಮ ತಾಯಿಯೊಂದಿಗೆ ನಿಂತಿರುತ್ತಾರೆ. ಈ ವೇಳೆ ಭಾರತೀಯ ಸೇನಾ ಯೋಧರ ಟ್ರಕ್ ಒಂದು ರಸ್ತೆಯಲ್ಲಿ ಸಾಗುತ್ತದೆ. ಸೇನೆಯ ಟ್ರಕ್ ಕಂಡೊಡನೆ ಮಕ್ಕಳು ಅಲರ್ಟ್ ಆಗುತ್ತಾರೆ.
ಅದರಲ್ಲಿ ಒಬ್ಬ ಪುಟ್ಟ ಬಾಲಕ ಅಟೆನ್ಷನ್ ಆಗಿ ನಿಂತು ಶಿಸ್ತಾಗಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸುತ್ತಾನೆ. ಸಿಕ್ಕಿಂನಲ್ಲಿ ಕಂಡುಬಂದ ದೃಶ್ಯ ಇದಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಹುಡುಗನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.