ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತರಾದ ಲೆಫ್ಟಿನೆಂಟ್ ವಿನಯ್ ನರ್ವಲ್ ಒಂದೂವರೆಗೆ ಗಂಟೆ ಬದುಕಿದ್ದರೂ ಅವರಿಗೆ ಸೂಕ್ತ ಸಹಾಯ ಸಿಗಲಿಲ್ಲ ಎಂದು ಸಹೋದರಿ ಆಕ್ರೋಶ ಹೊರಹಾಕಿದ ವಿಡಿಯೋ ವೈರಲ್ ಆಗಿದೆ.
ವಿನಯ್ ನರ್ವಾಲ್ ಮೃತದೇಹ ತಲುಪಿದ ಬಳಿಕ ತಮ್ಮನ್ನು ಸಾಂತ್ವನಪಡಿಸಲು ಬಂದ ರಾಜಕೀಯ ನಾಯಕರ ಮುಂದೆ ಸಹೋದರಿ ಅಳಲು ತೋಡಿಕೊಂಡಿದ್ದಾರೆ. ಸಹೋದರ ವಿನಯ್ ಬದುಕಲು ಅವಕಾಶವಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.
ನನ್ನ ಸಹೋದರ ದಾಳಿಯಾದ ಮೇಲೂ ಒಂದೂವರೆ ಗಂಟೆ ಬದುಕಿದ್ದ. ಆದರೆ ಸೂಕ್ತ ಸಮಯದಲ್ಲಿ ಸಹಾಯ ಸಿಗಲಿಲ್ಲ. ಹೀಗಾಗಿ ಅವನು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಸಹೋದರಿ ಬೇಸರ ತೋಡಿಕೊಂಡಿದ್ದಾರೆ.
ಉಗ್ರರು ದಾಳಿ ನಡೆಸಿದ ಜಾಗದಲ್ಲಿ ಸೇನಾ ಪಡೆಗಳೂ ಇರಲಿಲ್ಲ. ಅಲ್ಲಿಗೆ ವಾಹನ ವ್ಯವಸ್ಥೆಯೂ ಇಲ್ಲ. ಹೀಗಾಗಿ ತಕ್ಷಣಕ್ಕೆ ವೈದ್ಯಕೀಯ ನೆರವು ನೀಡಲು ಕಷ್ಟವಾಗಿತ್ತು. ಹೀಗಾಗಿ ಇದರ ಬಗ್ಗೆ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.