ನವದೆಹಲಿ: ಚಲಿಸುತ್ತಿರುವ ಕಾರಿನ ಮುಂಭಾಗವೇ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಶಾಕಿಂಗ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಿನ ದಿನಗಳಲ್ಲಿ ಯುವ ಜನತೆ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವುದು, ಆತ್ಮಹತ್ಯೆ ಮಾಡುವುದನ್ನು ವಿಡಿಯೋ ಮಾಡುವ ಗೀಳು ಹೆಚ್ಚಾಗುತ್ತಿದೆ. ಭಾರತದಲ್ಲೂ ಇಂತಹ ಅನೇಕ ಘಟನೆಗಳು ನಡೆದಿವೆ.
ಸಾವು ಎನ್ನುವುದರ ಗಂಭೀರತೆಯೂ ಅರಿವಿಲ್ಲದೇ ಚಿಕ್ಕ ವಿಚಾರಕ್ಕೆಲ್ಲಾ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಇಂದಿನ ಯುವ ಜನತೆ ತಲುಪಿದೆ. ಹೀಗಿರುವಾಗ ವಿದೇಶದಲ್ಲಿ ಯುವಕನೊಬ್ಬ ಜನನಿಬಿಡ ರಸ್ತೆಯಲ್ಲಿ ಕಾರಿನ ಅಡಿಗೆ ಹಾರಿ ಆತ್ಮಹತ್ಯೆ ಮಾಡುವ ವಿಡಿಯೋ ವೈರಲ್ ಆಗಿದೆ.
ರಸ್ತೆಯಲ್ಲಿ ವೇಗವಾಗಿ ಸಾಕಷ್ಟು ವಾಹನಗಳು ಓಡಾಡುತ್ತಿರುತ್ತವೆ. ಮೊದಲು ಯುವಕ ಫುಟ್ ಪಾತ್ ಮೇಲೆ ಓಡುತ್ತಾ ಸಾಗುತ್ತಾನೆ. ಎದುರಿನಿಂದ ದೊಡ್ಡ ಕಾರು ಬರುತ್ತಿದ್ದಂತೇ ಪಲ್ಟಿ ಹೊಡೆದು ರಸ್ತೆಗೆ ಹಾರಿ ಕಾರಿನ ಅಡಿಗೆ ಸಿಲುಕಿಕೊಳ್ಳುತ್ತಾನೆ. ಈ ಮೈ ಝುಮ್ ಎನ್ನುವ ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ.