ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಈ ಹಿಂದೆ ಹತ್ಯೆಯಾದ ಫಾಜಿಲ್ ತಮ್ಮನೇ ಸೂತ್ರಧಾರಿ, ಆತ ಇಬ್ಬರು ಹಿಂದೂಗಳನ್ನು ಬಳಸಿಕೊಂಡೇ ಕೃತ್ಯವೆಸಗಿದ್ದ ಎಂದು ತಿಳಿದುಬಂದಿದೆ.
ಬಜ್ಪೆಯಲ್ಲಿ ನಡು ರಸ್ತೆಯಲ್ಲೇ ಸುಹಾಸ್ ಶೆಟ್ಟಿ ಹತ್ಯೆ ಮಾಡಿದ್ದ ಆರೋಪದಲ್ಲಿ ಎಲ್ಲಾ 8 ಮಂದಿ ಆರೋಪಿಗಳನ್ನೂ ಪೊಲೀಸರು ಈಗ ಬಂಧಿಸಿದ್ದಾರೆ. ಈ ಪೈಕಿ ಇಬ್ಬರು ಹಿಂದೂಗಳೂ ಸೇರಿಕೊಂಡಿದ್ದಾರೆ ಎಂಬುದು ವಿಶೇಷ.
ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಫಾಜಿಲ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಆ ಕೊಲೆಯಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿ. ಇದೇ ವೈಷಮ್ಯದಿಂದ ಫಾಜಿಲ್ ಸಹೋದರನೇ ಸುಹಾಸ್ ಕೊಲೆಗೆ ಸ್ಕೆಚ್ ಹಾಕಿದ್ದ.
ಸುಹಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಸಪ್ವಾನ್, ನಿಯಾಜ್, ಮೊಹಮ್ಮದ್ ಮುಸಮ್ಮೀರ್, ಕಲಂದರ ಶಾಫಿ, ಆದಿಲ್ ಮಹರೂಫ್, ನಾಗರಾಜ್, ಮೊಹಮ್ಮದ್ ರಿಜ್ವಾನ್, ರಂಜಿತ್ ಎಂಬವರು ಬಂಧಿತರು. ಫಾಜಿಲ್ ತಮ್ಮ ಆದಿಲ್ ಕೊಲೆಗೆ ಸಂಚು ರೂಪಿಸಿದ್ದಲ್ಲದೆ 5 ಲಕ್ಷ ರೂ. ಫಂಡಿಂಗ್ ಮಾಡಿದ್ದ. ಆರೋಪಿಗಳಲ್ಲಿ ಒಬ್ಬರಾದ ಸಫ್ವಾನ್ ಮೇಲೆ ಈ ಹಿಂದೆ ಸುಹಾಸ್ ಮಾರಣಾಂತಿಕ ಹಲ್ಲೆ ನಡೆಸಿದ್ದ. ಹೀಗಾಗಿ ಆತನೂ ಈ ಕೊಲೆಯಲ್ಲಿ ಕೈ ಜೋಡಿಸಿದ್ದ ಎಂದು ತಿಳಿದುಬಂದಿದೆ.