ಬೆಳಗಾವಿ: ಮೂವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳಗಿ ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಪೃಥ್ವಿರಾಜ್ ಕರಬಾ(13), ಅಥರ್ವ ಸೌಂದಲಗ(15), ಸಮರ್ಥ ಗಡಕರಿ(13) ಎಂದು ಗುರುತಿಸಲಾಗಿದೆ.
ರಜೆಯ ಹಿನ್ನೆಲೆ ಮಕ್ಕಳು ನೀರಿನಲ್ಲಿ ಆಟವಾಡಲು ಸೈಕಲ್ ಹಿಡಿದುಕೊಂಡು ಊರ ಹೊರಗಿನ ಕೃಷಿ ಹೊಂಡಕ್ಕೆ ಹೋಗಿದ್ದಾರೆ.
ಮೂವರು ಮಕ್ಕಳಿಗೆ ಈಜಲು ಬರುತ್ತಿರಲಿಲ್ಲ, ಆದರೂ ಕೂಡಾ ನೀರಿಗೆ ಇಳಿದಿದ್ದಾರೆ.