Select Your Language

Notifications

webdunia
webdunia
webdunia
webdunia

ಇಷ್ಟು ಜನರ ಪ್ರೀತಿ ಗಳಿಸಿದ್ದೀಯಲ್ಲಾ ಅಣ್ಣಾ..: ಡಿಕೆಶಿಗೆ ವಿಜಯ್ ಪ್ರಕಾಶ್ ಹೊಗಳಿಕೆ

Vijay Prakash-DK Shivakumar
ಕನಕಪುರ: ಡಿಕೆ ಶಿವಕುಮಾರ್ ಸಾರಥ್ಯದಲ್ಲಿ ಕನಕಪುರದಲ್ಲಿ ಈಗ ಅದ್ಧೂರಿಯಾಗಿ ಕನಕೋತ್ಸವ ನಡೆಯುತ್ತಿದೆ. ನಿನ್ನೆ ಗಾಯಕ ವಿಜಯ್ ಪ್ರಕಾಶ್ ಭಾಗಿಯಾಗಿದ್ದು ಇಷ್ಟು ಜನರ ಪ್ರೀತಿ ಗಳಿಸಿದ್ದೀಯಲ್ಲಾ ಅಣ್ಣಾ.. ಎಂದು ಹೊಗಳಿದ್ದಾರೆ.

ನಿನ್ನೆಯ ದಿನದ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ಬಂದು ನೆರೆದಿದ್ದ ಜನರ ಮುಂದೆ ಹಾಡಿ ರಂಜಿಸಿದರು. ಈ ವೇಳೆ ಡಿಕೆ ಶಿವಕುಮಾರ್ ಕೂಡಾ ಪ್ರೇಕ್ಷಕರಾಗಿ ಕೂತಿದ್ದರು. ಅಲ್ಲಿದ್ದ ಜನರೆಲ್ಲರೂ ಡಿಕೆ ಡಿಕೆ ಎಂದಿದ್ದಕ್ಕೆ ವಿಜಯ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.

ನೆರೆದಿದ್ದ ಅಷ್ಟು ಜನರನ್ನು ನೋಡಿ ಇಷ್ಟೊಂದು ಜನರ ಪ್ರೀತಿ ಗಳಿಸಿದ್ದೀಯಲ್ಲಾ ಅಣ್ಣಾ ಇದಕ್ಕಿಂತ ಇನ್ನೇನು ಬೇಕು ಎಂದು ಡಿಕೆಯತ್ತ ನೋಡಿ ನಗು ನಗುತ್ತಲೇ ಹೊಗಳಿದ್ದಾರೆ ವಿಜಯ್ ಪ್ರಕಾಶ್. ಇದಕ್ಕೆ ವೇದಿಕೆಯ ಪಕ್ಕದಲ್ಲೇ ಕೂತಿದ್ದ ಡಿಕೆ ಶಿವಕುಮಾರ್ ನಗು ನಗುತ್ತಲೇ ಥಮ್ಸ್ ಅಪ್ ಮಾಡಿ ಹೌದು ಎಂದು ಒಪ್ಪಿಗೆ ಸೂಚಿಸಿದ್ದಾರೆ.

ಈಗಾಗಲೇ ಕನಕೋತ್ಸವದಲ್ಲಿ ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ರಚಿತಾ ರಾಮ್ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ತಾರೆಯರು ಬಂದು ನೆರೆದಿದ್ದವರನ್ನು ರಂಜಿಸಿ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Union Budget 2026: ರಾಜ್ಯಕ್ಕೆ ನಿರೀಕ್ಷಿಸಿದಷ್ಟು ಅನುದಾನ ಸಿಕ್ಕಿದೆಯೇ