Select Your Language

Notifications

webdunia
webdunia
webdunia
webdunia

Union Budget 2026: ರಾಜ್ಯಕ್ಕೆ ನಿರೀಕ್ಷಿಸಿದಷ್ಟು ಅನುದಾನ ಸಿಕ್ಕಿದೆಯೇ

Union Budget 2026
ನವದೆಹಲಿ: ಈ ಬಾರಿ ಬಜೆಟ್ ನಲ್ಲಿ ಕರ್ನಾಟಕ ಹಲವು ಅನುದಾನಗಳ ನಿರೀಕ್ಷೆಯಲ್ಲಿತ್ತು. ಆದರೆ ನಿರೀಕ್ಷಿಸಿದಷ್ಟು ಅನುದಾನ ಸಿಕ್ಕಿದೆಯೇ? ಇಲ್ಲಿದೆ ವಿವರ.

ಕರ್ನಾಟಕ ಈ ಬಾರಿ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಅನುದಾನದ ನಿರೀಕ್ಷೆಯಲ್ಲಿತ್ತು. ಆದರೆ ಅದು ಹುಸಿಯಾಗಿದೆ. ಇದರಿಂದಾಗಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ವಾಗ್ದಾಳಿ ನಡೆಸಲು ಮತ್ತೊಂದು ಪ್ರಬಲ ಕಾರಣ ಸಿಕ್ಕಂತಾಗಿದೆ.

ಬೆಂಗಳೂರಿಗೆ ಹೈ ಸ್ಪೀಡ್ ರೈಲು ಬಿಟ್ಟು ಬೇರೆ ಯಾವುದೇ ಪ್ರಮುಖ ಘೋಷಣೆಗಳು ಇಲ್ಲ. ಪ್ರತ್ಯೇಕವಾಗಿ ಕರ್ನಾಟಕಕ್ಕೆ ಯಾವುದೇ ಯೋಜನೆಗಳಿಲ್ಲ. ಆದರೆ ಕೃಷಿ ವಲಯಕ್ಕೆ ನೀಡಿದ ಕೊಡುಗೆಗಳಿಂದಲೇ ಕರ್ನಾಟಕ ಲಾಭ ಪಡೆದುಕೊಳ್ಳಬೇಕಾಗಿದೆ.

ಗೋಡಂಬಿ, ತೆಂಗು, ಕೊಕ್ಕೋ ಬೆಳೆಗಾರರಿಗೆ ಪ್ರೋತ್ಸಾಹ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲೂ ತೆಂಗು, ಕೊಕ್ಕೋ ಬೆಳೆಯಿದ್ದು ಈ ರೈತರಿಗೆ ಅನುಕೂಲವಾಗಲಿದೆ. ಕರ್ನಾಟಕ ಮತ್ತು ಕೇರಳದಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಲಾಗಿದೆ.  ಇದರ ಹೊರತಾಗಿ ರಾಜ್ಯಕ್ಕೆ ಯಾವುದೇ ಪ್ರತ್ಯೇಕ ಯೋಜನೆಗಳಿಲ್ಲ.

ಈ ಬಾರಿ ಬಜೆಟ್ ನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಬಹುಪಾಲು ಕೇರಳ, ತಮಿಳುನಾಡಿಗೆ ಕೊಡುಗೆ ನೀಡಲಾಗಿದೆ. ಈ ಎರಡೂ ರಾಜ್ಯಗಳಲ್ಲಿ ಸದ್ಯದಲ್ಲೇ ಚುನಾವಣೆಯಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಘೋಷಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕ ಬಜೆಟ್: ವಿಜಯೇಂದ್ರ