Publish Date: Sun, 01 Feb 2026 (12:30 IST)
Updated Date: Sun, 01 Feb 2026 (12:32 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ರನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಯುವ ಶಕ್ತಿ ಕೇಂದ್ರೀಕೃತ ಬಜೆಟ್ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಯುವ ಶಕ್ತಿ, ಮಹಿಳೆಯರು, ಕೃಷಿ, ಪ್ರವಾಸೋದ್ಯಮಕ್ಕೆ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. 2047 ಕ್ಕೆ ಭಾರತವನ್ನು ಸೂಪರ್ ಪವರ್ ರಾಷ್ಟ್ರವಾಗಿಸುವ ಗುರಿ ಪ್ರಧಾನಿ ಮೋದಿ ಹೊಂದಿದ್ದಾರೆ. ಅದಕ್ಕಾಗಿ ಯುವಶಕ್ತಿಯನ್ನು ಕೇಂದ್ರೀಕರಿಸಿ ಯೋಜನೆಗಳನ್ನು ಘೋಷಿಸಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದರು. ಈ ಬಾರಿ ಘೋಷಿಸಲಾದ ಹೊಸ ಯೋಜನೆಗಳ ಪಟ್ಟಿ ಇಲ್ಲಿದೆ.
-ಆತ್ಮನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ಅನುದಾನ ಘೋಷಣೆ
-ಭವಿಷ್ಯದ ಚಾಂಪಿಯನ್ ಗಳಿಗಾಗಿ 10 ಸಾವಿರ ಕೋಟಿ ರೂ ಘೋಷಣೆ
-ಮಧ್ಯಮ ಮತ್ತು ಸಣ್ಣ ಉದ್ದಿಮೆದಾರರಿಗೆ ಸಾಲ ಯೋಜನೆ
-ಟಿಯರ್ 2 ಹಾಗೂ 3 ನಗರಗಳ ಅಭಿವೃದ್ಧಿಗೆ ಒತ್ತು
-ರಾಷ್ಟ್ರೀಯ ಫೈಬರ್ ಯೋಜನೆ ಘೋಷಣೆ
-ಹಣಕಾಸು ಹಂಚಿಕೆ ಕ್ರೆಡಿಟ್ ಗ್ಯಾರಂಟಿ ಯೋಜನೆ
ಕಾರ್ಮಿಕ ಜವಳಿ ವಲಯ ಉತ್ತೇಜಿಸಲು ಹೊಸ ಯೋಜನೆಗಳು
-ಹೈಸ್ಪೀಡ್ ರೈಲ್ವೇ ಕಾರಿಡಾರ್ ಯೋಜನೆ ಘೋಷಣೆ
-ವಾರಣಾಸಿ, ಪಾಟ್ನಾದಲ್ಲಿ ಹಡಗು ದುರಸ್ತಿ ಕೇಂದ್ರಗಳ ಸ್ಥಾಪನೆ
-ತೆಂಗಿನ ಬೆಳೆ, ಸಂಸ್ಕರಣೆ, ರಫ್ತಿಗೆ ಉತ್ತೇಜನ
-ಕ್ರೀಡಾ ವಲಯದಲ್ಲಿ ಉದ್ಯೋಗಾವಕಾಶಕ್ಕೆ ಉತ್ತೇಜನ
-3 ಹೊಸ ಏಮ್ಸ್ ಆಸ್ಪತ್ರೆಗಳ ನಿರ್ಮಾಣ
-ಆಯುರ್ವೇದ ಆಸ್ಪತ್ರೆ, ಸಂಶೋಧನೆಗೆ ಉತ್ತೇಜನ
-ಶ್ರೀಗಂಧ ಬೆಳೆ ಬೆಳೆಯುವುದಕ್ಕೆ ಉತ್ತೇಜನ
-ವಿದೇಶೀ ವಿನಿಯಮ ಕಾನೂನಿಗೆ ಪರಿಷ್ಕರಣೆ
-ಉತ್ತರ ಭಾರತದಲ್ಲಿ ಮಾನಸಿಕ ಆರೋಗ್ಯಕ್ಕಾಗಿ ನಿಮ್ಹಾನ್ಸ್ ಆಸ್ಪತ್ರೆಗಳ ನಿರ್ಮಾಣ
-ದಿವ್ಯಾಂಗರಿಗೆ ಸಹಕಾರ ಯೋಜನೆ ಘೋಷಣೆ
-ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಧನ
-ಜಾಮ್ ನಗರದಲ್ಲಿ ಡಬ್ಲ್ಯುಎಚ್ ಒ ಕೇಂದ್ರ ಸ್ಥಾಪನೆ
-ಈಶಾನ್ಯ ರಾಜ್ಯಗಳ ಬೌದ್ಧ ತಾಣಗಳ ಅಭಿವೃದ್ಧಿ
-ಉತ್ತರ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ
- ಪ್ರತೀ ಜಿಲ್ಲೆಯಲ್ಲಿ 1 ಬಾಲಕಿಯರ ಹಾಸ್ಟೆಲ್ ನಿರ್ಮಾಣ
-ಕರ್ನಾಟಕ, ಕೇರಳ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ
-ಈಶಾನ್ಯ ಭಾರತದ ದೇವಾಲಯಗಳ ಅಭಿವೃದ್ಧಿಗೆ ಯೋಜನೆ
-5 ರಾಜ್ಯಗಳಲ್ಲಿ 4 ಸಾವಿರ ಇ ಬಸ್ ಗಳ ಸೌಲಭ್ಯ
-ದಿವ್ಯಾಂಗರಿಗೆ ದಿವ್ಯಾಂಗ ಸಹರಾ ಯೋಜನೆ
-ಮಹಿಳೆಯರಿಗಾಗಿ ಶಿ ಮಾರ್ಟ್ ಯೋಜನೆ