Publish Date: Sun, 01 Feb 2026 (10:12 IST)
Updated Date: Sun, 01 Feb 2026 (10:14 IST)
ನವದೆಹಲಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ 2026 ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಮನೆಯಲ್ಲಿಯೇ ಇದ್ದು ರಿಲ್ಯಾಕ್ಸ್ ಆಗಿ ಬಜೆಟ್ ವೀಕ್ಷಿಸಬಹುದಾಗಿದೆ.
ಈ ಬಾರಿ ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ. ಇಷ್ಟು ದಿನವೂ ಬಜೆಟ್ ವೀಕ್ಷಣೆ ಮಾಡುವಾಗ ಉದ್ಯೋಗಿಗಳಿಗೆ ಕಚೇರಿ ಕೆಲಸದ ಒತ್ತಡವಿರುತ್ತಿತ್ತು. ಆದರೆ ಈ ಬಾರಿ ಭಾನುವಾರವಾಗಿರುವುದರಿಂದ ಕೆಲಸದ ಒತ್ತಡವಿರುವುದಿಲ್ಲ.
ಮನೆಯಲ್ಲಿಯೇ ಕುಳಿತು ಆರಾಮವಾಗಿ ಬಜೆಟ್ ವೀಕ್ಷಿಸಬಹುದಾಗಿದೆ. ವಿಶೇಷವಾಗಿ ತೆರಿಗೆ ವಿನಾಯ್ತಿ ಹೆಚ್ಚಳವಾಗುತ್ತಾ ಎಂದು ನೌಕರ ವರ್ಗದವರು ಕುತೂಹಲದಿಂದ ಕಾಯುತ್ತಿದ್ದಾರೆ. ಜೊತೆಗೆ ಯಾವ ವಸ್ತುಗಳ ಬೆಲೆ ಇಳಿಕೆಯಾಗುತ್ತದೆ ಮತ್ತು ಏರಿಕೆಯಾಗುತ್ತದೆ ಎಂದು ಜನ ಎದಿರು ನೋಡುತ್ತಿದ್ದಾರೆ.
ಇಂದು 11 ಗಂಟೆಗೆ ಬಜೆಟ್ ಮಂಡನೆ ನೇರಪ್ರಸಾರ ಆರಂಭವಾಗಲಿದೆ. ದೂರದರ್ಶನ ವಾಹಿನಿ, ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಪ್ರಸಾರ ಮಾಡುವ ಸಂಸದ್ ಚಾನೆಲ್ ಸೇರಿದಂತೆ ಬಹುತೇಕ ವಾಹಿನಿಗಳಲ್ಲಿ ನೇರಪ್ರಸಾರ ಲಭ್ಯವಿರುತ್ತದೆ.