Select Your Language

Notifications

webdunia
webdunia
webdunia
webdunia

Union Budget 2026: ಕೇಂದ್ರ ಬಜೆಟ್ ಭಾನುವಾರ ಮಂಡನೆಯಾಗುತ್ತಿರುವುದಕ್ಕೆ ಇದೇ ಕಾರಣ

Union Budget 2026
ನವದೆಹಲಿ: ಈ ಬಾರಿ ಕೇಂದ್ರ ಬಜೆಟ್ 2026 ಭಾನುವಾರ ಮಂಡನೆಯಾಗುತ್ತಿರುವುದು ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಭಾನುವಾರ ಮಂಡನೆಯಾಗುತ್ತಿದೆ. ಅದಕ್ಕೆ ಕಾರಣವೂ ಇದೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 9 ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಅವರು ಭಾನುವಾರ ಬಜೆಟ್ ಮಂಡಿಸುತ್ತಿರುವುದು ವಿಶೇಷವಾಗಿದೆ. 2017 ರಿಂದ ಕೇಂದ್ರ ಬಜೆಟ್ ಪ್ರತೀ ವರ್ಷವೂ ಫೆಬ್ರವರಿ 1 ಕ್ಕೆ ಮಂಡನೆಯಾಗುತ್ತಿದೆ.

2016 ರವರೆಗೆ ಬ್ರಿಟಿಷ್ ಪದ್ಧತಿಯಂತೆ ಫೆಬ್ರವರಿ ಕೊನೆಯ ದಿನ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ ಬ್ರಿಟಿಷ್ ಪದ್ಧತಿಯನ್ನು ಮುರಿದು ಭಾರತದಲ್ಲಿ 2017 ರಿಂದ ಫೆಬ್ರವರಿ 1 ರಿಂದ ಬಜೆಟ್ ಮಂಡನೆ ಆರಂಭವಾಗಿತ್ತು. ಇದರಿಂದ ಸಚಿವಾಲಯಗಳು, ವ್ಯವಹಾರಗಳು ಮತ್ತು ಹೊಸ ನೀತಿಗಳ ಮೇಲೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಹೆಚ್ಚಿನ ಸಮಯ ಸಿಗುತ್ತಿದೆ.

ಅದರಂತೆ ಫೆಬ್ರವರಿ 1 ಈ ಬಾರಿ ಭಾನುವಾರ ಬರುತ್ತಿದೆ. ಭಾನುವಾರವೆಂಬ ಕಾರಣಕ್ಕೆ ಸಂಪ್ರದಾಯ ಮುರಿಯುವುದು ಬೇಡವೆಂದು ಮೋದಿ ಸರ್ಕಾರ ಈ ಬಾರಿ ಭಾನುವಾರವಾಗಿದ್ದರೂ ಬಜೆಟ್ ಮಂಡಿಸಲು ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಜಿತ್‌ ಕನಸು ಈಡೇರಿಸುತ್ತೀರೆಂಬ ನಂಬಿಕೆಯಿದೆ: ಸುನೇತ್ರಾಗೆ ಮೋದಿ ಶುಭಾಶಯ